ADVERTISEMENT

ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌ ಟೂರ್ನಿ: ಗೋವಾ–ಬೆಂಗಾಲ್ ಪಂದ್ಯ ಡ್ರಾ

​ಪ್ರಜಾವಾಣಿ ವಾರ್ತೆ
Published 29 ಜನವರಿ 2021, 16:29 IST
Last Updated 29 ಜನವರಿ 2021, 16:29 IST
ಗೋಲು ಗಳಿಸಲು ಈಸ್ಟ್ ಬೆಂಗಾಲ್‌ ಆಟಗಾರರು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದ ಗೋವಾ ತಂಡದ ಗೋಲ್‌ಕೀಪರ್ ಧೀರಜ್ ಸಿಂಗ್‌ ಮೊಯಿರಂಗ್‌ದೆಮ್‌– ಪಿಟಿಐ ಚಿತ್ರ
ಗೋಲು ಗಳಿಸಲು ಈಸ್ಟ್ ಬೆಂಗಾಲ್‌ ಆಟಗಾರರು ನಡೆಸಿದ ಪ್ರಯತ್ನವನ್ನು ವಿಫಲಗೊಳಿಸಿದ ಗೋವಾ ತಂಡದ ಗೋಲ್‌ಕೀಪರ್ ಧೀರಜ್ ಸಿಂಗ್‌ ಮೊಯಿರಂಗ್‌ದೆಮ್‌– ಪಿಟಿಐ ಚಿತ್ರ   

ಮಡಗಾಂವ್: ಉತ್ತಮ ಆಟವಾಡಿದ ಎಸ್‌ಸಿ ಈಸ್ಟ್ ಬೆಂಗಾಲ್ ತಂಡವು ಐಎಸ್‌ಎಲ್ ಫುಟ್‌ಬಾಲ್ ಟೂರ್ನಿಯಲ್ಲಿ ಶುಕ್ರವಾರ ಆತಿಥೇಯ ಎಫ್‌ಸಿ ಗೋವಾ ಎದುರು 1–1ರ ಡ್ರಾ ಸಾಧಿಸಿದೆ. ಇಲ್ಲಿನ ಫಟೋರ್ಡ ಕ್ರೀಡಾಂಗಣದಲ್ಲಿ ನಡೆದ ಹಣಾಹಣಿ 1–1ರಿಂದ ಅಂತ್ಯಗೊಂಡಿತು.

ಗೋವಾ ಪರ ಇಗೊರ್ ಅಂಗುಲೊ 39ನೇ ನಿಮಿಷದಲ್ಲಿ ಗೋಲು ದಾಖಲಿಸಿದರೆ, ಈಸ್ಟ್ ಬೆಂಗಾಲ್‌ ತಂಡದ ಡೇನಿಯಲ್ ಫಾಕ್ಸ್ 65ನೇ ನಿಮಿಷದಲ್ಲಿ ಸಮಬಲದ ಗೋಲು ಹೊಡೆದರು.

ಪಂದ್ಯದ ಮೊದಲ ನಿಮಿಷದಲ್ಲೇ ಬೆಂಗಾಲ್ ತಂಡಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಆದರೆ ಅಂಥೋನಿ ಪಿಲ್ಕಿಂಗ್ಟನ್ ಒದ್ದ ಚೆಂಡು ಗುರಿ ಸೇರಲಿಲ್ಲ. 37ನೇ ನಿಮಿಷದಲ್ಲಿ ಗೋವಾದ ಗೋಲು ಗಳಿಕೆಯ ಪ್ರಯತ್ನವನ್ನು ಬೆಂಗಾಲ್ ಗೋಲ್‌ಕೀಪರ್‌ ದೇವಜೀತ್ ಮಜುಂದಾರ್ ಯಶಸ್ವಿಯಾಗಿ ತಡೆದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.