ADVERTISEMENT

ಬೆಲ್ಜಿಯಂ ವಿರುದ್ಧ ಗೆಲುವು ದಾಖಲಿಸಿದ ಮೊರೊಕ್ಕೊ: ಬ್ರುಸೆಲ್ಸ್‌ನಲ್ಲಿ ಹಿಂಸಾಚಾರ

ಪ್ರಸಿದ್ಧ ಫುಟ್‌ಬಾಲ್ ತಂಡ ಬೆಲ್ಜಿಯಂ ಮೊರೊಕ್ಕೊ ವಿರುದ್ಧ ಸೋಲು ಅನುಭವಿಸಿದೆ.

ಏಜೆನ್ಸೀಸ್
Published 28 ನವೆಂಬರ್ 2022, 4:35 IST
Last Updated 28 ನವೆಂಬರ್ 2022, 4:35 IST
   

ಬ್ರುಸೆಲ್ಸ್: ಫಿಫಾ ವಿಶ್ವಕಪ್‌ನಲ್ಲಿ ಭಾನುವಾರದ ಪಂದ್ಯದಲ್ಲಿ ಮೊರೊಕ್ಕೊ ತಂಡವು ಬೆಲ್ಜಿಯಂ ಅನ್ನು 2–0ಯಿಂದ ಸೋಲಿಸಿದೆ.

ಮೊರೊಕ್ಕೊ ತಂಡಕ್ಕೆ ಕಳೆದ 24 ವರ್ಷಗಳಲ್ಲಿ ವಿಶ್ವಕಪ್ ಪಂದ್ಯಗಳಲ್ಲಿ ಗಳಿಸಿದ ಮೊದಲ ಜಯ ಇದಾಗಿದ್ದು, ಅಲ್ಲಿನ ಅಭಿಮಾನಿಗಳ ಸಂಭ್ರಮಕ್ಕೆ ಪಾರವೇ ಇಲ್ಲದಂತಾಗಿದೆ.

ಆದರೆ, ಬೆಲ್ಜಿಯಂ ತಂಡ ಸೋಲು ಅನುಭವಿಸುತ್ತಲೇ ಬ್ರುಸೆಲ್ಸ್‌ನಲ್ಲಿ ಹಿಂಸಾಚಾರ ಸಂಭವಿಸಿದೆ.

ADVERTISEMENT

ಬೆಲ್ಜಿಯಂ ಅಭಿಮಾನಿಗಳು ಬೀದಿಗಿಳಿದು ಗದ್ದಲ ಎಬ್ಬಿಸಿದ್ದಾರೆ. ಅಂಗಡಿಗಳ ಕಿಟಕಿಗಳಿಗೆ ಕಲ್ಲು ಹೊಡೆದು, ಪಟಾಕಿ ಸಿಡಿಸಿದ್ದಾರೆ. ಜತೆಗೆ ವಾಹನಗಳಿಗೆ ಬೆಂಕಿ ಹಚ್ಚಿದ್ದಾರೆ.

ಹಿಂಸಾಚಾರ ಸಂಬಂಧ ಪೊಲೀಸರು 11 ಜನರನ್ನು ಬಂಧಿಸಿದ್ದಾರೆ.

ಗದ್ದಲವನ್ನು ಕಡಿಮೆ ಮಾಡಲು ಪೊಲೀಸರು ಶ್ರಮಿಸುತ್ತಿದ್ದಾರೆ. ಜತೆಗೆ ಹೆಚ್ಚುವರಿ ಸಿಬ್ಬಂದಿ ನಿಯೋಜಿಸಿ, ಹಿಂಸಾಚಾರಕ್ಕೆ ಕಡಿವಾಣ ಹಾಕಲು ಮುಂದಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.