ADVERTISEMENT

ಹ್ಯಾರಿ ಕೇನ್‌ನತ್ತ ನಿರೀಕ್ಷೆಯ ನೋಟ

ಇಂಗ್ಲೆಂಡ್–ಪನಾಮ ಹಣಾಹಣಿ ಇಂದು

ಏಜೆನ್ಸೀಸ್
Published 23 ಜೂನ್ 2018, 17:11 IST
Last Updated 23 ಜೂನ್ 2018, 17:11 IST
ಪನಾಮ ತಂಡದ ರೋಮನ್ ಟೊರೆಸ್‌ (ಎಡ), ಫೆಲಿಪ್ ಬಾಲೊಯ್‌ (ಮಧ್ಯ) ಮತ್ತು ಗ್ಯಾಬ್ರಿಯೆಲ್‌ ಗೊಮೆಜ್‌ ಮಾತುಕತೆಯಲ್ಲಿ ತೊಡಗಿದ್ದ ಸಂದರ್ಭ ಎಎಫ್‌ಪಿ ಚಿತ್ರ
ಪನಾಮ ತಂಡದ ರೋಮನ್ ಟೊರೆಸ್‌ (ಎಡ), ಫೆಲಿಪ್ ಬಾಲೊಯ್‌ (ಮಧ್ಯ) ಮತ್ತು ಗ್ಯಾಬ್ರಿಯೆಲ್‌ ಗೊಮೆಜ್‌ ಮಾತುಕತೆಯಲ್ಲಿ ತೊಡಗಿದ್ದ ಸಂದರ್ಭ ಎಎಫ್‌ಪಿ ಚಿತ್ರ   

ನಿಜ್ನಿ ನೊವ್‌ಗರೊಡ್‌: ಒಂದು ದಶಕದ ನಂತರ ವಿಶ್ವಕಪ್‌ನ ಮೊದಲ ಪಂದ್ಯದಲ್ಲಿ ಗೆದ್ದು ಸಂಭ್ರಮಿಸಿದ ಇಂಗ್ಲೆಂಡ್‌ ತಂಡ ಮತ್ತೊಂದು ಗೆಲುವಿನ ವಿಶ್ವಾಸದಲ್ಲಿ ಭಾನುವಾರ ಕಣಕ್ಕೆ ಇಳಿಯಲಿದೆ. ಎರಡನೇ ಪಂದ್ಯದಲ್ಲಿ ಈ ತಂಡದ ಎದುರಾಳಿ ಪನಾಮ.

ಭಾನುವಾರದ ಪಂದ್ಯದಲ್ಲಿ ಗೆದ್ದರೆ ಇಂಗ್ಲೆಂಡ್‌ನ ಪ್ರೀ ಕ್ವಾರ್ಟರ್‌ ಫೈನಲ್ ಹಾದಿ ಸುಗಮವಾಗಲಿದೆ. ಬೆಲ್ಜಿಯಂ ಎದುರು 0–3 ಅಂತರದಿಂದ ಸೋತಿರುವ ಪನಾಮವನ್ನು ಸುಲಭವಾಗಿ ಮಣಿಸಿ ಈ ಕನಸು ನನಸು ಮಾಡಿಕೊಳ್ಳಲು ತಂಡ ಪ್ರಯತ್ನಿಸಲಿದೆ.

ಟ್ಯುನಿಷಿಯಾವನ್ನು 2–1ರಿಂದ ಮಣಿಸಿದ್ದ ಪಂದ್ಯದಲ್ಲಿ ಇಂಗ್ಲೆಂಡ್‌ನ ಹ್ಯಾರಿ ಕೇನ್‌ ಮಿಂಚಿದ್ದರು. ಅವರು 11 ಮತ್ತು 90+1ನೇ ನಿಮಿಷದಲ್ಲಿ ಗೋಲು ಗಳಿಸಿ ತಂಡವನ್ನು ಗೆಲ್ಲಿಸಿದ್ದರು. ಆದ್ದರಿಂದ ಪನಾಮ ಎದುರು ಕೂಡ ಅವರ ಮೇಲೆ ತಂಡವು ಅಪಾರ ನಿರೀಕ್ಷೆ ಇಟ್ಟುಕೊಂಡಿದೆ.

ADVERTISEMENT

ಮೊದಲ ಪಂದ್ಯದಲ್ಲಿ ಪ್ರತಿರೋಧ ಒಡ್ಡದೇ ಎದುರಾಳಿ ತಂಡಕ್ಕೆ ಶರಣಾದ ಪನಾಮ, ಇಂಗ್ಲೆಂಡ್‌ ವಿರುದ್ಧ ಉತ್ತಮ ಆಟ ಆಡಿ ನಾಕೌಟ್ ಹಂತ ಪ್ರವೇಶಿಸುವ ಆಸೆಯನ್ನು ಜೀವಂತವಾಗಿರಿಸಿಕೊಳ್ಳಲು ಶ್ರಮಿಸಲಿದೆ.

ತೊಡೆನೋವಿನಿಂದಾಗಿ ಡೆಲೆ ಅವರ ಬದಲಿಗೆ ರೂಬೆನ್‌ ಲಾಫ್ಟಸ್ ಅಥವಾ ಮಾರ್ಕಸ್‌ ರಾಶ್‌ಫೊರ್ಡ್ ಅವರಿಗೆ ಇಂಗ್ಲೆಂಡ್ ತಂಡದಲ್ಲಿ ಸ್ಥಾನ ಸಿಗುವ ಸಾಧ್ಯತೆ ಇದೆ. ಬಲಿಷ್ಠ ಎದುರಾಳಿಗಳ ವಿರುದ್ಧ ಪನಾಮ 4–1–4–1ರ ಮಾದರಿಯಲ್ಲಿ ತಂಡವನ್ನು ಕಣಕ್ಕೆ ಇಳಿಸುವ ಸಾಧ್ಯತೆ ಇದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.