
ಪ್ರಜಾವಾಣಿ ವಾರ್ತೆ
ಫಿಫಾ ವಿಶ್ವಕಪ್
ಪ್ಯಾರಿಸ್: 2026ರ ಫುಟ್‌ಬಾಲ್ ವಿಶ್ವಕಪ್ ವಿಜೇತ ತಂಡವು ₹452.06 ಕೋಟಿ ಬಹುಮಾನ ಪಡೆಯಲಿದೆ ಎಂದು ಫಿಫಾ ಬುಧವಾರ ತಿಳಿಸಿದೆ.
ಟೂರ್ನಿಯು ಒಟ್ಟು ₹5,921 ಕೋಟಿ ಬಹುಮಾನ ಮೊತ್ತವನ್ನು ಒಳಗೊಂಡಿದೆ. 2022ರಲ್ಲಿ ಕತಾರ್‌ನಲ್ಲಿ ನಡೆದ ಕೊನೆಯ ಟೂರ್ನಿಗಿಂತ ಶೇ 50ರಷ್ಟು (₹3,978 ಕೋಟಿ) ಬಹುಮಾನ ಮೊತ್ತ ಹೆಚ್ಚಳವಾಗಿದೆ.
ಮುಂದಿನ ವರ್ಷ ಜೂನ್ 11ರಿಂದ ಜುಲೈ 19ರವರೆಗೆ ಅಮೆರಿಕ, ಮೆಕ್ಸಿಕೊ ಮತ್ತು ಕೆನಡಾ ದೇಶಗಳ ಜಂಟಿ ಆತಿಥ್ಯದಲ್ಲಿ ಟೂರ್ನಿ ನಡೆಯಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.