ADVERTISEMENT

ಇಂದಿನಿಂದ ಎನ್‌ಎಫ್‌ಸಿ ಟೂರ್ನಿ

​ಪ್ರಜಾವಾಣಿ ವಾರ್ತೆ
Published 19 ಏಪ್ರಿಲ್ 2019, 19:10 IST
Last Updated 19 ಏಪ್ರಿಲ್ 2019, 19:10 IST

ಕೊಲ್ಲಾಪುರ:ಇಲ್ಲಿನ ರಾಜರ್ಷಿ ಸಾಹು ಮತ್ತು ಪೊಲೋ ಕ್ರೀಡಾಂಗಣದಲ್ಲಿಶನಿವಾರ‌ದಿಂದ ರಾಷ್ಟ್ರೀಯ ಮಹಿಳಾಜ್ಯೂನಿಯರ್‌ ಫುಟ್‌ಬಾಲ್‌ ಚಾಂಪಿಯನ್‌ಷಿಪ್‌ ಟೂರ್ನಿ ಆರಂಭವಾಗಲಿದೆ. ‘ಡಿ’ ಗುಂಪಿನ ಪಂದ್ಯದಲ್ಲಿ ಹರಿಯಾಣ ವಿರುದ್ಧ ಕರ್ನಾಟಕ ಸೆಣಸಲಿದೆ.

2020ರಲ್ಲಿ ನಡೆಯುವ 17 ವರ್ಷದೊಳಗಿನವರ ಫಿಫಾ ಮಹಿಳಾ ವಿಶ್ವಕಪ್‌ಗಾಗಿ ಭಾರತದ ತಂಡದ ಆಯ್ಕೆ ಮುಂದಿನ ತಿಂಗಳು ನಡೆಯಲಿದ್ದು, ಎನ್ಎಫ್‌ಸಿ ಟೂರ್ನಿಗೆ ಮಹತ್ವ ಬಂದಿದೆ.

ಚಾಂಪಿಯನ್‌ಷಿಪ್‌ನ ಐದನೇ ಆವೃತ್ತಿ ಇದಾಗಿದ್ದು, ಟೂರ್ನಿಯಲ್ಲಿ ಉತ್ತಮ ಸಾಧನೆ ಮಾಡುವ ಆಟಗಾರರು ಫಿಫಾ ವಿಶ್ವಕಪ್ ತಂಡದಲ್ಲಿ ಸ್ಥಾನ ಗಿಟ್ಟಿಸಲಿದ್ದಾರೆ. 27 ತಂಡಗಳು ಭಾಗವಹಿಸಿದ್ದು, 8 ಗುಂಪುಗಳನ್ನು ರಚಿಸಲಾಗಿದೆ. ಪ್ರತಿ ಗುಂಪಿನಲ್ಲಿ ಮೊದಲ ಸ್ಥಾನ ಪಡೆದ ತಂಡ ಕ್ವಾರ್ಟರ್ ಫೈನಲ್‌ ಪ್ರವೇಶಿಸಲಿದೆ.

ADVERTISEMENT

ಇಂದಿನ ಪಂದ್ಯಗಳು: ಗ್ರೂಪ್‌ ‘ಎ’: ಜಾರ್ಖಂಡ್‌– ಜಮ್ಮು ಕಾಶ್ಮೀರ,ಗ್ರೂಪ್‌ ‘ಬಿ’: ತಮಿಳುನಾಡು–ಮಧ್ಯಪ್ರದೇಶ,ಗ್ರೂಪ್‌ ‘ಸಿ’: ಮಣಿಪುರ – ಉತ್ತರಖಂಡ್‌, ಗೋವಾ – ತ್ರಿಪುರ, ಗ್ರೂಪ್‌ ‘ಡಿ’: ಪಶ್ಚಿಮ ಬಂಗಾಳ – ಅರುಣಾಚಲ ಪ್ರದೇಶ, ಹರಿಯಾಣ – ಕರ್ನಾಟಕ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.