ADVERTISEMENT

ಫುಟ್‌ಬಾಲ್: ಮುಂಬೈ ಸಿಟಿ ಎಫ್‌ಸಿ ತೊರೆದ ಅಮರಿಂದರ್

ಪಿಟಿಐ
Published 31 ಮೇ 2021, 13:01 IST
Last Updated 31 ಮೇ 2021, 13:01 IST
ಅಮರಿಂದರ್ ಸಿಂಗ್ –ಐಎಸ್‌ಎಲ್‌ ಮೀಡಿಯಾ ಚಿತ್ರ
ಅಮರಿಂದರ್ ಸಿಂಗ್ –ಐಎಸ್‌ಎಲ್‌ ಮೀಡಿಯಾ ಚಿತ್ರ   

ಮುಂಬೈ: ಇಂಡಿಯನ್ ಸೂಪರ್ ಲೀಗ್ (ಐಎಸ್‌ಎಲ್‌) ಚಾಂಪಿಯನ್ ಮುಂಬೈ ಸಿಟಿ ಎಫ್‌ಸಿಯೊಂದಿಗೆ ಐದು ಋತುಗಳ ಕಾಲ ಇದ್ದ ಗೋಲ್‌ಕೀಪರ್ ಅಮರಿಂದರ್ ಸಿಂಗ್ ತಂಡವನ್ನು ತೊರೆದಿದ್ದಾರೆ. ಅವರ ಒಪ್ಪಂದದ ಅವಧಿ ಸೋಮವಾರ ಮುಗಿದಿದೆ ಎಂದು ಫ್ರಾಂಚೈಸ್ ತಿಳಿಸಿದೆ.

27 ವರ್ಷದ ಅಮರಿಂದರ್ ಸಿಂಗ್ 2016ರ ಸೆಪ್ಟೆಂಬರ್ ಏಳರಂದು ತಂಡ ಸೇರಿದ್ದರು. ಬೆಂಗಳೂರು ಎಫ್‌ಸಿಯಲ್ಲಿದ್ದ ಅವರನ್ನು ಆರಂಭದಲ್ಲಿ ಅರೆಕಾರಿಕ ಗುತ್ತಿಗೆ ಆಧಾರದಲ್ಲಿ ಕರೆಸಿಕೊಳ್ಳಲಾಗಿತ್ತು. ಆ ವರ್ಷದ ನವೆಂಬರ್‌ನಲ್ಲಿ ಎಫ್‌ಸಿ ಗೋವಾ ವಿರುದ್ಧ ಅವರು ಮುಂಬೈ ಪರ ಮೊದಲ ಪಂದ್ಯ ಆಡಿದ್ದರು.

2018ರ ಮಾರ್ಚ್‌ನಲ್ಲಿ ಮೂರು ವರ್ಷಗಳ ಒಪ್ಪಂದದ ಮೇಲೆ ತಂಡವನ್ನು ಸೇರಿಕೊಂಡಿದ್ದರು. ತಂಡದ ನಾಯಕನಾಗಿಯೂ ಕಾರ್ಯನಿರ್ವಹಿಸಿದ್ದ ಅವರು 2020ರ ಜನವರಿ ನಾಲ್ಕರಂದು ನಡೆದ ಎಟಿಕೆ ಎದುರಿನ ಐಎಸ್‌ಎಲ್ ಹಣಾಹಣಿಯಲ್ಲಿ ಆಡುವುದರೊಂದಿಗೆ ತಂಡದ ಪರವಾಗಿ ಗರಿಷ್ಠ ಪಂದ್ಯಗಳನ್ನು ಆಡಿದ ಆಟಗಾರ ಎನಿಸಿಕೊಂಡಿದ್ದರು.

ADVERTISEMENT

ಅವರು ಮುಂಬೈ ಪರ 84 ಪಂದ್ಯಗಳನ್ನು ಆಡಿದ್ದಾರೆ. ಕಳೆದ ಬಾರಿಯ ಐಎಸ್‌ಎಲ್‌ನಲ್ಲಿ ಎಟಿಕೆ ಮೋಹನ್ ಬಾಗನ್ ಎದುರಿನ ಫೈನಲ್‌ ಅವರು ಕೊನೆಯದಾಗಿ ಆಡಿದ ಪಂದ್ಯ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.