
ಪ್ರಜಾವಾಣಿ ವಾರ್ತೆ
ಫುಟ್‌ಬಾಲ್
ಬೆಂಗಳೂರು: ಹಫೀಸ್ ಪಿ.ಎ. ಅವರ ಆಟದ ನೆರವಿನಿಂದ ಎಫ್‌ಸಿ ಮಂಗಳೂರು ತಂಡವು ಬಿಡಿಎಫ್‌ಎ ಬಿ ಡಿವಿಷನ್ ಲೀಗ್ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನ ಪಂದ್ಯದಲ್ಲಿ ಮಂಗಳವಾರ 2–0 ಗೋಲುಗಳಿಂದ ರಿವೀವ್ ಎಫ್‌ಸಿ ತಂಡವನ್ನು ಮಣಿಸಿತು.
ಬೆಂಗಳೂರು ಫುಟ್‌ಬಾಲ್ ಕ್ರೀಡಾಂಗಣದಲ್ಲಿ ನಡೆದ ಬಿ ಗುಂಪಿನ ಪಂದ್ಯದಲ್ಲಿ ಮಂಗಳೂರು ತಂಡದ ಪರ ಹಫೀಸ್ (57ನೇ ಮತ್ತು 80+4ನೇ ನಿಮಿಷ) ಎರಡು ಗೋಲು ದಾಖಲಿಸಿದರು. ಇದೇ ಗುಂಪಿನ ಮತ್ತೊಂದು ಪಂದ್ಯದಲ್ಲಿ ಜುನೊ ಎಫ್‌ಸಿ ತಂಡವು 1–1ರಿಂದ ವಿಲಿಯಂ ಎಫ್‌ಸಿ ತಂಡದೊಂದಿಗೆ ಡ್ರಾ ಸಾಧಿಸಿತು. ಜುನೊ ಪರ ಪೃಥ್ವಿ ಜಿ (16ನೇ) ಮತ್ತು ವಿಲಿಯಂ ಪರ ಧನಂಜಯ ಎ. (23ನೇ) ಗೋಲು ಗಳಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.