ADVERTISEMENT

ಫುಟ್‌ಬಾಲ್ | ರೊನಾಲ್ಡೊಗೆ ಬ್ಯಾಲನ್ ಡಿ’ ಓರ್ ನೀಡುವುದು ಸರಿಯಲ್ಲ: ಐಕರ್‌

ಏಜೆನ್ಸೀಸ್
Published 18 ನವೆಂಬರ್ 2019, 6:33 IST
Last Updated 18 ನವೆಂಬರ್ 2019, 6:33 IST
ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ  ಐಕರ್‌ ಕ್ಯಾಸಿಲ್ಲಾಸ್(ಒಳಚಿತ್ರದಲ್ಲಿ)
ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ಐಕರ್‌ ಕ್ಯಾಸಿಲ್ಲಾಸ್(ಒಳಚಿತ್ರದಲ್ಲಿ)   

ಮ್ಯಾಡ್ರಿಡ್‌:ಪೋರ್ಚುಗಲ್‌ ಫುಟ್‌ಬಾಲ್‌ ತಾರೆ ಕ್ರಿಸ್ಟಿಯಾನೊ ರೊನಾಲ್ಡೊಅವರಿಗೆ ಪ್ರತಿಷ್ಠಿತ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿ ಈ ಬಾರಿ ಲಭಿಸುವುದು ತಾಂತ್ರಿಕವಾಗಿ ಸರಿಯಲ್ಲ ಎಂದುರಿಯಲ್‌ ಮ್ಯಾಡ್ರಿಡ್‌ ಎಫ್‌ಸಿ ಹಾಗೂ ಸ್ಪೇನ್‌ ತಂಡದ ಮಾಜಿ ಆಟಗಾರ ಐಕರ್‌ ಕ್ಯಾಸಿಲ್ಲಾಸ್ ಅಭಿಪ್ರಾಯ ಪಟ್ಟಿದ್ದಾರೆ.

ಈ ಹಿಂದೆ ರೊನಾಲ್ಡೊ ಜೊತೆ ಆಡಿದ್ದ ಹಾಗೂಸದ್ಯ ಪೊರ್ಟೊ ಎಫ್‌ಸಿ ಪರ ಆಡುತ್ತಿರುವಐಕರ್‌,‘ಈ ವರ್ಷದ ಪ್ರಶಸ್ತಿ ಪಟ್ಟಿಯಲ್ಲಿ ರೊನಾಲ್ಡೊ ಹೆಸರು ಇರಬಾರದು’ ಎಂದಿದ್ದಾರೆ.

‘ವರ್ಜಿಲ್‌ ವ್ಯಾನ್‌ ಡಿಕ್‌ ಅವರನ್ನು ಯುಇಎಫ್‌ಎ (ಯುರೋಪಿಯನ್ ಫುಟ್‌ಬಾಲ್ ಸಂಘಟನೆಗಳ ಒಕ್ಕೂಟ) ಅತ್ಯುತ್ತಮ ಆಟಗಾರ ಎಂದು ಆಯ್ಕೆ ಮಾಡಿದೆ. ಲಿಯೊನೆಲ್‌ ಮೆಸ್ಸಿ ಅವರನ್ನು ಫಿಫಾ ಆಯ್ಕೆ ಮಾಡಿದೆ. ಒಂದು ವೇಳೆ ಬ್ಯಾಲನ್‌ ಡಿ’ಓರ್‌ ಪ್ರಶಸ್ತಿಯನ್ನು ರೊನಾಲ್ಡೊಗೆ ನೀಡಿದರೆ, ಅತ್ಯುನ್ನತ ವೈಯಕ್ತಿಕ ಪ್ರಶಸ್ತಿಗೆ ಆಟಗಾರರನ್ನು ಆಯ್ಕೆ ಮಾಡಲು ನಾವು ಬಳಸುತ್ತಿರುವ ಮಾನದಂಡ ತಾಂತ್ರಿಕವಾಗಿ ಸರಿಯಾಗಿಲ್ಲ ಎಂದು ನನಗೆ ತೋರುತ್ತದೆ’ ಎಂದು ಅವರು ಟ್ವೀಟ್‌ ಮಾಡಿದ್ದಾರೆ.

ADVERTISEMENT

ನೆದರ್ಲೆಂಡ್ಸ್ ರಾಷ್ಟ್ರೀಯ ತಂಡ ಹಾಗೂ ಲಿವರ್‌ಪೂಲ್‌ ಕ್ಲಬ್‌ ಪರ ಆಡುವವರ್ಜಿಲ್‌, ವಿಶ್ವದ ಶ್ರೇಷ್ಠ ಡಿಫೆಂಡರ್‌ಗಳಲ್ಲಿ ಒಬ್ಬರೆಂದು ಹೆಸರಾದವರು.

2019ರ ಬ್ಯಾಲನ್‌ ಡಿ’ ಓರ್‌ ಫುಟ್‌ಬಾಲ್‌ ಪ್ರಶಸ್ತಿ ರೇಸ್‌ನಲ್ಲಿರುವ 30 ಆಟಗಾರರ ಹೆಸರನ್ನು ಕಳೆದ ತಿಂಗಳು ಘೋಷಿಸಲಾಗಿಗೆ. ಅರ್ಜೆಂಟೀನಾ ಆಟಗಾರ ಲಯೊನೆಲ್‌ ಮೆಸ್ಸಿ, ರೊನಾಲ್ಡೊ ಹಾಗೂ ವರ್ಜಿಲ್‌ ನಡುವೆ ಪೈಪೋಟಿ ಇದೆ.

ಫ್ರಾನ್ಸ್‌ ಫುಟ್‌ಬಾಲ್‌ ನಿಯತಕಾಲಿಕೆ ನೀಡುವ ಈ ಪ್ರಶಸ್ತಿ ಮೇಲೆ ಆಟಗಾರ ಮೆಸ್ಸಿ, ರೊನಾಲ್ಡೊ ದಶಕಗಳಿಂದಲೂ ಹಿಡಿತ ಸಾಧಿಸಿದ್ದರು. ಹೋದ ವರ್ಷದ ಡಿಸೆಂಬರ್‌ನಲ್ಲಿ ಕ್ರೊವೇಷ್ಯಾದ ಲೂಕಾ ಮಾಡ್ರಿಕ್‌ ಇವರಿಬ್ಬರ ಅಧಿಪತ್ಯವನ್ನು ಕೊನೆಗಾಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2018ರಲ್ಲಿ ರಿಯಲ್ ಮ್ಯಾಡ್ರಿಡ್‌ ಹಾಗೂ ರಾಷ್ಟ್ರೀಯ ತಂಡ ಕ್ರೊವೇಷ್ಯಾ ಪರ ಅವರ ಕಾಲ್ಚಳಕ ಗಮನಸೆಳೆದಿತ್ತು. ಆದರೆ ಈ ಬಾರಿ ಮಾಡ್ರಿಕ್‌ ಹೆಸರು ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಇಲ್ಲ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.