ADVERTISEMENT

ಫುಟ್‌ಬಾಲ್‌: ಬ್ಯಾಲನ್‌ ಡಿ ಓರ್‌ ಪ್ರಶಸ್ತಿ ಸ್ಪರ್ಧೆಯಲ್ಲಿ ಮೆಸ್ಸಿ, ರೊನಾಲ್ಡೊ

ಏಜೆನ್ಸೀಸ್
Published 22 ಅಕ್ಟೋಬರ್ 2019, 10:38 IST
Last Updated 22 ಅಕ್ಟೋಬರ್ 2019, 10:38 IST
ಲಯೊನೆಲ್‌ ಮೆಸ್ಸಿ
ಲಯೊನೆಲ್‌ ಮೆಸ್ಸಿ   

ಪ್ಯಾರಿಸ್‌: ಪ್ರತಿಷ್ಠಿತ2019ರ ಬ್ಯಾಲನ್‌ ಡಿ’ ಓರ್‌ ಫುಟ್‌ಬಾಲ್‌ ಪ್ರಶಸ್ತಿಗೆ ಲಯೊನೆಲ್‌ ಮೆಸ್ಸಿ, ಕ್ರಿಸ್ಟಿಯಾನೊ ರೊನಾಲ್ಡೊ ಹಾಗೂ ವರ್ಜಿಲ್‌ ವ್ಯಾನ್‌ ಡಿಕ್‌ ಪ್ರಮುಖ ಸ್ಪರ್ಧಿಗಳಾಗಿದ್ದಾರೆ. ಬ್ರೆಜಿಲ್‌ ತಾರೆ ನೇಮರ್‌ ಹೊರಗುಳಿದಿದ್ದಾರೆ.

ಸೋಮವಾರ 30 ಸ್ಪರ್ಧಿಗಳ ಹೆಸರನ್ನು ಘೋಷಿಸಲಾಯಿತು. ವರ್ಷದ ಶ್ರೇಷ್ಠ ಫುಟ್‌ಬಾಲ್‌ ಆಟಗಾರನಿಗೆ ಈ ಪ್ರಶಸ್ತಿ ನೀಡಲಾಗುತ್ತದೆ.

ಫ್ರಾನ್ಸ್‌ ಫುಟ್‌ಬಾಲ್‌ ನಿಯತಕಾಲಿಕೆ ನೀಡುವ ಈ ಪ್ರಶಸ್ತಿ ಮೇಲೆ ಅರ್ಜೆಂಟೀನಾ ಆಟಗಾರ ಮೆಸ್ಸಿ ಹಾಗೂ ಪೋರ್ಚುಗಲ್‌ ಪರ ಆಡುವ ರೊನಾಲ್ಡೊ ದಶಕಗಳಿಂದ ಹಿಡಿತ ಸಾಧಿಸಿದ್ದರು. ಹೋದ ವರ್ಷದ ಡಿಸೆಂಬರ್‌ನಲ್ಲಿ ಕ್ರೊವೇಷ್ಯಾದ ಲೂಕಾ ಮಾಡ್ರಿಕ್‌ ಇವರಿಬ್ಬರ ಅಧಿಪತ್ಯವನ್ನು ಕೊನೆಗಾಣಿಸಿ ಪ್ರಶಸ್ತಿಗೆ ಮುತ್ತಿಕ್ಕಿದ್ದರು. 2018ರಲ್ಲಿ ರಿಯಲ್ ಮ್ಯಾಡ್ರಿಡ್‌ ಹಾಗೂ ರಾಷ್ಟ್ರೀಯ ತಂಡ ಕ್ರೊವೇಷ್ಯಾ ಪರ ಅವರ ಕಾಲ್ಚಳಕ ಗಮನಸೆಳೆದಿತ್ತು. ಆದರೆ ಈ ಬಾರಿ ಮಾಡ್ರಿಕ್‌ ಹೆಸರು ನಾಮನಿರ್ದೇಶನಗೊಂಡವರ ಪಟ್ಟಿಯಲ್ಲಿ ಇಲ್ಲ.

ADVERTISEMENT

ನೆದರ್ಲೆಂಡ್ಸ್ ರಾಷ್ಟ್ರೀಯ ತಂಡ ಹಾಗೂ ಲಿವರ್‌ಪೂಲ್‌ ಕ್ಲಬ್‌ ಪರ ಆಡುವ ವರ್ಜಿಲ್‌ ವ್ಯಾನ್‌ ಡಿಕ್‌, ಪ್ರಶಸ್ತಿಗೆ ಸ್ಪರ್ಧೆಯಲ್ಲಿರುವ ಇನ್ನೊಂದು ಪ್ರಮುಖ ಹೆಸರು. ವಿಶ್ವದ ಶ್ರೇಷ್ಠ ಡಿಫೆಂಡರ್‌ಗಲ್ಲಿ ಒಬ್ಬರೆಂದು ಹೆಸರಾದವರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.