ADVERTISEMENT

ಫುಟ್‌ಬಾಲ್‌: ಮಾಜಿ ಗೋಲ್‌ಕೀಪರ್‌ ಸುಧೀರ್‌ ನಿಧನ

​ಪ್ರಜಾವಾಣಿ ವಾರ್ತೆ
Published 3 ಜುಲೈ 2022, 15:28 IST
Last Updated 3 ಜುಲೈ 2022, 15:28 IST

ನವದೆಹಲಿ (ಪಿಟಿಐ): ಭಾರತ ಫುಟ್‌ಬಾಲ್‌ ತಂಡದ ಮಾಜಿ ಗೋಲ್‌ಕೀಪರ್‌ ಇ.ಎನ್.ಸುಧೀರ್‌ (70) ಗೋವಾದ ಮಪುಸಾದಲ್ಲಿ ಭಾನುವಾರ ಬೆಳಿಗ್ಗೆ ನಿಧನರಾದರು. ಅವರಿಗೆ ಪುತ್ರ ಹಾಗೂ ಪುತ್ರಿ ಇದ್ದಾರೆ.

1972 ರಲ್ಲಿ ಇಂಡೊನೇಷ್ಯಾ ವಿರುದ್ಧದ ಪಂದ್ಯದೊಂದಿಗೆ ಅಂತರರಾಷ್ಟ್ರೀಯ ಫುಟ್‌ಬಾಲ್‌ಗೆ ಪದಾರ್ಪಣೆ ಮಾಡಿದ್ದ ಸುಧೀರ್‌, 9 ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ.

1973ರ ಮರ್ಡೆಕಾ ಕಪ್‌ ಮತ್ತು 1974ರ ಏಷ್ಯನ್‌ ಕ್ರೀಡಾಕೂಟದಲ್ಲಿ ಅವರು ಭಾರತ ತಂಡವನ್ನು ಅವರು ಪ್ರತಿನಿಧಿಸಿದ್ದರು.

ADVERTISEMENT

ಸಂತೋಷ್‌ ಟ್ರೋಫಿ ಟೂರ್ನಿಗಳಲ್ಲಿ ಕೇರಳ, ಗೋವಾ ಮತ್ತು ಮಹಾರಾಷ್ಟ್ರ ರಾಜ್ಯ ತಂಡಗಳ ಪರ ಆಡಿದ್ದಾರೆ. ಕ್ಲಬ್‌ ಮಟ್ಟದಲ್ಲಿ ಯಂಗ್‌ ಚಾಲೆಂಜರ್ಸ್ (ಕೇರಳ), ವಾಸ್ಕೊ ಸ್ಪೋರ್ಟ್ಸ್‌ ಕ್ಲಬ್ (ಗೋವಾ) ಮತ್ತು ಮಹೀಂದ್ರ ಅಂಡ್‌ ಮಹೀಂದ್ರ ತಂಡಗಳನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.