ADVERTISEMENT

ಖ್ಯಾತ ಪುಟ್ಬಾಲ್ ಪಟು ಚುನಿ ಗೋಸ್ವಾಮಿ ನಿಧನ

ಪಿಟಿಐ
Published 30 ಏಪ್ರಿಲ್ 2020, 13:32 IST
Last Updated 30 ಏಪ್ರಿಲ್ 2020, 13:32 IST
ಚುನಿ ಗೋಸ್ವಾಮಿ (ಕೃಪೆ: ಬಿಸಿಸಿಐ ಟ್ವಿಟರ್ )
ಚುನಿ ಗೋಸ್ವಾಮಿ (ಕೃಪೆ: ಬಿಸಿಸಿಐ ಟ್ವಿಟರ್ )   

ಕೊಲ್ಕತ್ತ: ಭಾರತದ ಖ್ಯಾತ ಫುಟ್ಬಾಲ್ ಪಟು, ಕ್ರಿಕೆಟಿಗ ಚುನಿ ಗೋಸ್ವಾಮಿ ಗುರುವಾರ ಹೃದಯ ಸ್ತಂಭನದಿಂದ ನಿಧನರಾಗಿದ್ದಾರೆ.ಅವರಿಗೆ 82 ವರ್ಷ ವಯಸ್ಸಾಗಿತ್ತು.

1962ರಲ್ಲಿ ನಡೆದ ಏಷ್ಯನ್ ಗೇಮ್ಸ್‌ನಲ್ಲಿ ಭಾರತದ ಪುಟ್ಬಾಲ್ತಂಡ ಇವರ ನಾಯಕತ್ವದಲ್ಲಿ ಚಿನ್ನ ಗೆದ್ದಿತ್ತು. ಫಸ್ಟ್ ಕ್ಲಾಸ್ ಕ್ರಿಕೆಟ್‌ನಲ್ಲಿ ಬಂಗಾಳ ತಂಡವನ್ನೂ ಇವರು ಪ್ರತಿನಿಧಿಕರಿಸಿದ್ದರು.

ಇವರು ಪತ್ನಿ ಬಸಂತಿ ಮತ್ತು ಮಗ ಸುದೀಪ್ತೊ ಅವರನ್ನು ಅಗಲಿದ್ದಾರೆ.
ಸಂಜೆ 5 ಗಂಟೆ ಹೊತ್ತಿಗೆ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರೆಳೆದರು ಎಂದು ಕುಟುಂಬದ ಮೂಲಗಳು ಹೇಳಿರುವುದಾಗಿ ಪಿಟಿಐ ವರದಿ ಮಾಡಿದೆ. ಸಕ್ಕರೆ ಕಾಯಿಲೆ, ಪ್ರೊಸ್ಟ್ರೇಟ್ ಮತ್ತು ನರ ಸಂಬಂಧಿ ಕಾಯಿಲೆಯಿಂದ ಅವರು ಬಳಲುತ್ತಿದ್ದರು.

ADVERTISEMENT

1956ರಿಂದ 1964ರ ಅವಧಿಯಲ್ಲಿ ಅವರು ಭಾರತ ತಂಡದಲ್ಲಿದ್ದು 50 ಪುಟ್ಬಾಲ್ ಪಂದ್ಯಗಳನ್ನಾಡಿದ್ದಾರೆ.1962 ರಿಂದ 1973ರ ಅವಧಿಯಲ್ಲಿ ಬಂಗಾಳ ಕ್ರಿಕೆಟ್ತಂಡದ ನಾಯಕನಾಗಿ 46 ಪಂದ್ಯಗಳನ್ನಾಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.