ADVERTISEMENT

ನೇಷನ್ಸ್‌ ಕಪ್‌: ಇರಾನ್‌ಗೆ ಮಣಿದ ಭಾರತ

ಪಿಟಿಐ
Published 1 ಸೆಪ್ಟೆಂಬರ್ 2025, 23:30 IST
Last Updated 1 ಸೆಪ್ಟೆಂಬರ್ 2025, 23:30 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಹಿಸಾರ್‌ (ತಾಜಿಕಿಸ್ತಾನ): ಭಾರತ ಫುಟ್‌ಬಾಲ್‌ ತಂಡವು ಇಲ್ಲಿ ನಡೆಯುತ್ತಿರುವ ಕಾಫಾ ನೇಷನ್ಸ್‌ ಕಪ್‌ ಟೂರ್ನಿಯಲ್ಲಿ ಹಾಲಿ ಚಾಂಪಿಯನ್‌ ಇರಾನ್‌ ಎದುರು 0–3ರಿಂದ ಸೋಲು ಕಂಡಿತು.

ಸೋಮವಾರ ನಡೆದ ಗುಂಪು ಹಂತದ ಪಂದ್ಯದಲ್ಲಿ ಆರಂಭದಿಂದಲೂ ರಕ್ಷಣಾತ್ಮಕ ಆಟವಾಡಿದ ಭಾರತ ಗೋಲು ಗಳಿಸುವಲ್ಲಿ ವಿಫಲವಾಯಿತು. ಮೊದಲಾರ್ಧದಲ್ಲಿ ಗೋಲು ಹೊಡೆಯುವಲ್ಲಿ ಯಶಸ್ಸು ಕಾಣದ ಇರಾನ್‌, ದ್ವಿತೀಯಾರ್ಧದಲ್ಲಿ ಆಕ್ರಮಣಕಾರಿ ಆಟವಾಡಿ ಮೂರು ಗೋಲು ಹೊಡೆಯಿತು. ಅದರಲ್ಲೂ, ಕೊನೆಯ ಏಳು ನಿಮಿಷದ ಅವಧಿಯಲ್ಲಿ ಎರಡು ಗೋಲು ಹೊಡೆದು ಪಾರಮ್ಯ ಮೆರೆಯಿತು.

ADVERTISEMENT

ಫಿಫಾ ರ್‍ಯಾಂಕಿಂಗ್‌ನಲ್ಲಿ ಇರಾನ್‌ 20ನೇ ಸ್ಥಾನದಲ್ಲಿದ್ದರೆ, ಭಾರತ 133ನೇ ರ್‍ಯಾಂಕ್‌ನಲ್ಲಿರುವುದನ್ನು ಇಲ್ಲಿ ಸ್ಮರಿಸಬಹುದು.

ಭಾರತ ತಂಡವು ಸೆಪ್ಟೆಂಬರ್‌ 4ರಂದು ನಡೆಯಲಿರುವ ಗುಂಪು ಹಂತದ ತನ್ನ ಅಂತಿಮ ಪಂದ್ಯದಲ್ಲಿ ಅಫ್ಗಾನಿಸ್ತಾನ ಎದುರು ಸೆಣಸಲಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.