ADVERTISEMENT

ಗೋಲ್‌ಕೀಪಿಂಗ್‌ ಆನ್‌ಲೈನ್‌ ತರಬೇತಿಗೆ ಹಾಜರಾಗಲಿರುವ ಗುರುಪ್ರೀತ್‌ಸಿಂಗ್‌ ಸಂಧು

ಪಿಟಿಐ
Published 30 ಸೆಪ್ಟೆಂಬರ್ 2020, 11:39 IST
Last Updated 30 ಸೆಪ್ಟೆಂಬರ್ 2020, 11:39 IST
ಗುರುಪ್ರೀತ್‌ ಸಿಂಗ್‌ ಸಂಧು–ಪ್ರಜಾವಾಣಿ ಚಿತ್ರ
ಗುರುಪ್ರೀತ್‌ ಸಿಂಗ್‌ ಸಂಧು–ಪ್ರಜಾವಾಣಿ ಚಿತ್ರ   

ನವದೆಹಲಿ: ಅರ್ಜುನ ಪುರಸ್ಕಾರ ಹಾಗೂ ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ (ಎಐಎಫ್‌ಎಫ್‌) ವರ್ಷದ ಆಟಗಾರ ಪ್ರಶಸ್ತಿ ವಿಜೇತ ಗುರುಪ್ರೀತ್‌ ಸಿಂಗ್‌ ಸಂಧು ಅವರು ಮೊದಲ ಬಾರಿಗೆ ನಡೆಸುತ್ತಿರುವ ಆನ್‌ಲೈನ್‌ ಗೋಲ್‌ಕೀಪಿಂಗ್‌ ಮಾರ್ಗದರ್ಶನ ತರಗತಿಗೆ ಹಾಜರಾಗಲಿದ್ದಾರೆ.

ಶುಕ್ರವಾರದಿಂದ ಮೂರು ದಿನಗಳ ಕಾಲ ತರಗತಿ ನಡೆಯಲಿದ್ದು, ಗುರುಪ್ರೀತ್‌ ಹೊರತುಪಡಿಸಿ 29 ಆಟಗಾರರು ಹಾಜರಾಗಲಿದ್ದಾರೆ. ತರಬೇತಿಗಾಗಿ 200 ಮಂದಿ ಅರ್ಜಿ ಸಲ್ಲಿಸಿದ್ದರು.

‘ಆನ್‌ಲೈನ್‌ ಗೋಲ್‌ಕೀಪಿಂಗ್‌ ತರಬೇತಿ ಸರ್ಟಿಫಿಕೇಟ್‌ ಕೋರ್ಸ್‌ನಲ್ಲಿ ಭಾಗವಹಿಸಲು ಉತ್ಸುಕನಾಗಿದ್ದೇನೆ. ಇಂತಹ ತರಗತಿಗೆ ನಾನು ಮೊದಲ ಬಾರಿ ಪಾಲ್ಗೊಳ್ಳುತ್ತಿರುವೆ. ಪರಿಣತ ತರಬೇತುದಾರರಿಂದ ಕಲಿಯಲು ಕಾತರನಾಗಿದ್ದೇನೆ‘ ಎಂದು ಗುರುಪ್ರೀತ್‌ ಹೇಳಿದ್ದಾಗಿ ಎಐಎಫ್‌ಎಫ್‌ ವೆಬ್‌ಸೈಟ್‌ ಉಲ್ಲೇಖಿಸಿದೆ.

ADVERTISEMENT

ಎಎಫ್‌ಸಿ ಮೊದಲ ಹಂತದ ಗೋಲ್‌ಕೀಪಿಂಗ್‌ ತರಗತಿ ಹಾಗೂ ಎಐಎಫ್‌ಎಫ್‌ ಸಿ ಸರ್ಟಿಫಿಕೇಟ್‌ ಕೋರ್ಸ್‌ಗೆ ಅರ್ಹತೆ ಪಡೆಯಲು ಈ ಆನ್‌ಲೈನ್‌ ತರಗತಿ ಅಗತ್ಯ ಎಂದು ಪರಿಗಣಿಸಲಾಗಿದೆ.

ದಿನೇಶ್‌ ನಾಯರ್‌ ಮತ್ತು ಗುಂಪೆ ರೈಮ್‌ ಅವರು ಮುಖ್ಯ ತರಬೇತುದಾರರಾಗಿದ್ದು, ರಜತ್ ಗುಹಾ, ರಘುವೀರ್‌ ಖಾನೋಲ್ಕರ್‌ ಹಾಗೂ ಪ್ರದ್ಯುಮ್‌ ರೆಡ್ಡಿ ಸಹಾಯಕ ಕೋಚ್‌ಗಳಾಗಿದ್ದಾರೆ.

ಪ್ರತಿಭೆಗಳ ಹುಡುಕಾಟಕ್ಕಾಗಿ ಆನ್‌ಲೈನ್‌ ಕಾರ್ಯಾಗಾರವು ಅಕ್ಟೋಬರ್‌ 12ರಿಂದ 16ರವರೆಗೆ ನಡೆಯಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.