ADVERTISEMENT

ಅಕ್ಟೋಬರ್‌ 8ರಿಂದ ಐ–ಲೀಗ್ ಅರ್ಹತಾ ಟೂರ್ನಿ

ಪಿಟಿಐ
Published 16 ಸೆಪ್ಟೆಂಬರ್ 2020, 16:32 IST
Last Updated 16 ಸೆಪ್ಟೆಂಬರ್ 2020, 16:32 IST
ಕಳೆದ ಬಾರಿಯ ಐ–ಲೀಗ್ ಟೂರ್ನಿಯ ಪಂದ್ಯವೊಂದರ ನೋಟ–ಪಿಟಿಐ ಚಿತ್ರ
ಕಳೆದ ಬಾರಿಯ ಐ–ಲೀಗ್ ಟೂರ್ನಿಯ ಪಂದ್ಯವೊಂದರ ನೋಟ–ಪಿಟಿಐ ಚಿತ್ರ   

ಕೋಲ್ಕತ್ತ: ಐ–ಲೀಗ್‌ನ ಅರ್ಹತಾ ಪಂದ್ಯಗಳು ಅಕ್ಟೋಬರ್ ಎಂಟರಂದು ಇಲ್ಲಿ ಆರಂಭಗೊಳ್ಳಲಿದ್ದು ಭಾರತದಲ್ಲಿ ಫುಟ್‌ಬಾಲ್ ಕ್ರೀಡೆಗೆ ಈ ಮೂಲಕ ಮರುಚಾಲನೆ ಸಿಗಲಿದೆ. ಈ ವಿಷಯವನ್ನು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಬುಧವಾರ ತಿಳಿಸಿದೆ.

ಐ–ಲೀಗ್‌ನಲ್ಲಿ ಬಾಕಿ ಉಳಿದಿರುವ ಒಂದು ಸ್ಥಾನಕ್ಕಾಗಿ ಐದು ತಂಡಗಳು ಸೆಣಸಲಿದ್ದು ನಗರದ ವಿವೇಕಾನಂದ ಯುವ ಭಾರತಿ ಕ್ರೀಡಾಂಗಣ ಮತ್ತು ಕಲ್ಯಾಣಿಯ ನಗರಪಾಲಿಕೆ ಕ್ರೀಡಾಂಗಣ ಈ ಪಂದ್ಯಗಳಿಗೆ ಆತಿಥ್ಯ ವಹಿಸಲಿದೆ.

ರೌಂಡ್ ರಾಬಿನ್ ಮಾದರಿಯ ಅರ್ಹತಾ ಟೂರ್ನಿಯಲ್ಲಿ ಎಆರ್‌ಎ ಎಫ್‌ಸಿ, ಭವಾನಿಪುರ್ ಎಫ್‌ಸಿ, ಗರ್ವಾಲ್ ಎಫ್‌ಸಿ, ಎಫ್‌ಸಿ ಬೆಂಗಳೂರು ಮತ್ತು ಮೊಹಮ್ಮಡನ್ ಎಸ್‌ಸಿ ತಂಡಗಳು ಕಣಕ್ಕೆ ಇಳಿಯಲಿವೆ. ಪಾಯಿಂಟ್ ಪಟ್ಟಿಯಲ್ಲಿ ಅಗ್ರ ಸ್ಥಾನ ಗಳಿಸುವ ತಂಡ ಲೀಗ್‌ನಲ್ಲಿ ಆಡಲು ಅರ್ಹತೆ ಗಳಿಸಲಿದೆ.

ADVERTISEMENT

ಕೋವಿಡ್ –19ರಿಂದಾಗಿ ದೇಶಿ ಟೂರ್ನಿಗಳನ್ನು ಎರಡು ತಿಂಗಳ ಕಾಲ ಮುಂದೂಡಲಾಗಿತ್ತು. ಕ್ಲಬ್‌ಗಳು ಆಟಗಾರರನ್ನು ಬದಲಿಸಿಕೊಳ್ಳಲು ಆಗಸ್ಟ್ ಒಂದರಿಂದ ಅವಕಾಶ ನೀಡಲಾಗಿದ್ದು ಅಕ್ಟೋಬರ್ 31ರ ವರೆಗೆ ಮುಂದುವರಿಯಲಿದೆ.

‘ಐ–ಲೀಗ್‌ ಪಶ್ಚಿಮ ಬಂಗಾಳದ ಕೆಲವೇ ಕೆಲವು ಅಂಗಣಗಳಲ್ಲಿ ನವೆಂಬರ್‌ನಲ್ಲಿ ನಡೆಯಲಿವೆ‘ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ ಲೀಗ್‌ಗಳ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಸುನಂದೊ ಧರ್ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.