ADVERTISEMENT

ಭಾರತದಲ್ಲಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್

ಪಿಟಿಐ
Published 19 ಫೆಬ್ರುವರಿ 2020, 19:30 IST
Last Updated 19 ಫೆಬ್ರುವರಿ 2020, 19:30 IST

ಕ್ವಾಲಾಲಂಪುರ: ಭಾರತವು 2022ರ ಎಎಫ್‌ಸಿ ಮಹಿಳೆಯರ ಏಷ್ಯಾಕಪ್ ಫುಟ್‌ಬಾಲ್ ಟೂರ್ನಿಗೆ ಆತಿಥ್ಯ ವಹಿಸಲಿದೆ. ಭಾರತದಲ್ಲಿ ಮಹಿಳಾ ಫುಟ್‌ಬಾಲ್‌ ಬೆಳವಣಿಗೆಗೆ ನೆರವಾಗುವ ದೃಷ್ಟಿಯಲ್ಲಿ ಟೂರ್ನಿಯನ್ನು ಆಯೋಜಿಸಲು ಏಷ್ಯನ್ ಫುಟ್‌ಬಾಲ್ ಕಾನ್ಫೆಡರೇಷನ್ ಮುಂದಾಗಿದೆ.

ಈ ವರ್ಷಾಂತ್ಯದಲ್ಲಿ 17 ವರ್ಷದೊಳಗಿನ ಮಹಿಳೆಯರ ಫಿಫಾ ವಿಶ್ವಕಪ್ ಭಾರತದಲ್ಲಿ ನಡೆಯಲಿದೆ. ಈ ಟೂರ್ನಿಗೆ ಆತಿಥ್ಯ ವಹಿಸುವುದರಿಂದ ಏಷ್ಯಾಕಪ್ ನಡೆಸಲು ಇದು ಸೂಕ್ತ ಸ್ಥಳ ಎಂಬ ತೀರ್ಮಾನಕ್ಕೆ ಕಾನ್ಫೆಡರೇಷನ್ ಬಂದಿದೆ. ಚೀನಾ ತೈಪೆ ಮತ್ತು ಉಜ್ಬೆಕಿಸ್ತಾನ್ ಕೂಡ ಆತಿಥ್ಯಕ್ಕಾಗಿ ಬಿಡ್ ಸಲ್ಲಿಸಿದ್ದವು. ಫಿಫಾ 17 ವರ್ಷದೊಳಗಿನವರ ಟೂರ್ನಿ ನಡೆಯಲಿರುವ ಡಿ.ವೈ.ಪಾಟೀಲ ಕ್ರೀಡಾಂಗಣ, ಟ್ರಾನ್ಸ್ ಸ್ಟೇಡಿಯಾ ಅರೆನಾ ಮತ್ತು ಫತೋರ್ಡ ಕ್ರೀಡಾಂಗಣಗಳಲ್ಲಿ ಏಷ್ಯಾಕಪ್‌ ಪಂದ್ಯಗಳು ಕೂಡ ನಡೆಯಲಿವೆ ಎಂದು ಕಾನ್ಫೆಡರೇಷನ್ ತಿಳಿಸಿದೆ.

2016ರಲ್ಲಿ 16 ವರ್ಷದೊಳಗಿನವರಎಎಫ್‌ಸಿ ಚಾಂಪಿಯನ್‌ಷಿಪ್‌ ಮತ್ತು 2017ರಲ್ಲಿ 17 ವರ್ಷದೊಳಗಿನವರ ಫಿಫಾ ವಿಶ್ವಕಪ್ ಟೂರ್ನಿ ಭಾರತದಲ್ಲೇ ನಡೆದಿತ್ತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.