ADVERTISEMENT

ಬಾಂಗ್ಲಾ ಎದುರು ಡ್ರಾ ಸಾಧಿಸಿದ ಭಾರತ

ಸ್ಯಾಫ್‌ 18 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿ

ಪಿಟಿಐ
Published 2 ಅಕ್ಟೋಬರ್ 2019, 16:58 IST
Last Updated 2 ಅಕ್ಟೋಬರ್ 2019, 16:58 IST

ಕಠ್ಮಂಡು: ಭಾರತ ತಂಡವು ಸ್ಯಾಫ್‌ 18 ವರ್ಷದೊಳಗಿನವರ ಫುಟ್‌ಬಾಲ್‌ ಟೂರ್ನಿಯ ಮೊದಲ ಪಂದ್ಯದಲ್ಲಿ ಬಾಂಗ್ಲಾದೇಶ ವಿರುದ್ಧ ಸೋಮವಾರ ಗೋಲು ರಹಿತ ಡ್ರಾ ಸಾಧಿಸಿದೆ.

ಪಂದ್ಯದ ಆರಂಭದಿಂದಲೇಭಾರತ ಆಕ್ರಮಣಕಾರಿ ಆಟಕ್ಕೆ ಮುಂದಾಯಿತು. ಒಂಬತ್ತನೇ ನಿಮಿಷದಲ್ಲಿ ತಂಡದ ಗೋಲ್‌ಕೀಪರ್‌ ಪ್ರಭಶುಕನ್‌ ಸಿಂಗ್‌ ಗಿಲ್‌ ಗಾಯಗೊಂಡು ಹೊರಗುಳಿದದ್ದು ತಂಡಕ್ಕೆ ದುಬಾರಿಯಾಯಿತು. ಬಾಂಗ್ಲಾ ತಂಡದ ಡಿಫೆನ್ಸ್ ವಿಭಾಗ ಬಲಿಷ್ಠವಾಗಿತ್ತು.

36ನೇ ನಿಮಿಷದಲ್ಲಿ ಸುಮಿತ್‌ ರಾಠಿ ಹೆಡರ್‌ ಮೂಲಕ ಗೋಲು ಬಾರಿಸಲು ಪ್ರಯತ್ನಿಸಿದರು. ಆದರೆ ಚೆಂಡು ಸ್ವಲ್ಪವೇ ಅಂತರದಲ್ಲಿ ಆವರಣದ ಹೊರಗೆ ಹೋಯಿತು. ಹಲವು ಬಾರಿ ಪ್ರಯತ್ನಿಸಿದರೂ ಭಾರತಕ್ಕೆ ಗೋಲು ಗಳಿಸುವ ಅವಕಾಶ ಲಭಿಸಲಿಲ್ಲ.

ADVERTISEMENT

ಭಾರತ ಮುಂದಿನ ಪಂದ್ಯವನ್ನು ಬುಧವಾರ ಶ್ರೀಲಂಕಾ ವಿರುದ್ಧ ಆಡಲಿದೆ. ಮೊದಲ ಪಂದ್ಯದಲ್ಲಿ ಶ್ರೀಲಂಕಾ, ಬಾಂಗ್ಲಾ ತಂಡಕ್ಕೆ 0–3ರಿಂದ ಸೋತಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.