ADVERTISEMENT

ಫುಟ್‌ಬಾಲ್‌: ಏಷ್ಯಾಕಪ್ ಅರ್ಹತಾ ಟೂರ್ನಿಯಲ್ಲಿ ಭಾರತ ಜಯಭೇರಿ

ಪಿಟಿಐ
Published 11 ಜೂನ್ 2022, 19:40 IST
Last Updated 11 ಜೂನ್ 2022, 19:40 IST
ಹೆಡರ್‌ ಮಾಡಲು ಯತ್ನಿಸಿದ ಸುನಿಲ್ ಚೆಟ್ರಿ (ಮಧ್ಯೆ)– ಪಿಟಿಐ ಚಿತ್ರ
ಹೆಡರ್‌ ಮಾಡಲು ಯತ್ನಿಸಿದ ಸುನಿಲ್ ಚೆಟ್ರಿ (ಮಧ್ಯೆ)– ಪಿಟಿಐ ಚಿತ್ರ   

ಕೋಲ್ಕತ್ತ: ನಾಯಕ ಸುನಿಲ್ ಚೆಟ್ರಿ ಹಾಗೂ ಸಹಲ್ ಅಬ್ದುಲ್‌ ಸಮದ್‌ ಗಳಿಸಿದ ಸೊಗಸಾದ ಗೋಲುಗಳ ಬಲದಿಂದ ಭಾರತ ತಂಡವು ಏಷ್ಯಾಕಪ್ ಅರ್ಹತಾ ಟೂರ್ನಿಯಲ್ಲಿ ಜಯ ಗಳಿಸಿತು.

ಶನಿವಾರ ಇಲ್ಲಿಯ ಸಾಲ್ಟ್‌ಲೇಕ್ ಅಂಗಣದಲ್ಲಿ ನಡೆದ ಪಂದ್ಯದಲ್ಲಿ ಚೆಟ್ರಿ, 86ನೇ ನಿಮಿಷದಲ್ಲಿ ಲಭಿಸಿದ ಫ್ರಿಕಿಕ್‌ನಲ್ಲಿ ಕಾಲ್ಚಳಕ ತೋರಿದರು. ಇದು 83ನೇ ಅಂತರರಾಷ್ಟ್ರೀಯ ಗೋಲಾಗಿತ್ತು. ಜುಬ್‌ಯಾರ್ ಅಮಿರಿ (88ನೇ ನಿ.) ಗಳಿಸಿದ ಗೋಲಿನ ಬಲದಿಂದ ಅಫ್ಗಾನಿಸ್ತಾನ ಸಮಬಲ ಸಾಧಿಸಿತ್ತು.

ಇಂಜುರಿ ಅವಧಿಯಲ್ಲಿ ಮೋಡಿ ಮಾಡಿದ ಸಮದ್‌, ಭಾರತದ ಗೆಲುವನ್ನು ಖಚಿತಪಡಿಸಿದರು. ಇದೇ 14ರಂದು ಅಂತಿಮ ಅರ್ಹತಾ ಪಂದ್ಯದಲ್ಲಿ ಭಾರತ ತಂಡವು ಹಾಂಗ್‌ಕಾಂಗ್ ಸವಾಲು ಎದುರಿಸಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.