ADVERTISEMENT

ಎಎಫ್‌ಸಿ ಕಪ್‌: ಸಿರಿಯಾಗೆ ಮಣಿದ ಭಾರತ

ಪಿಟಿಐ
Published 23 ಜನವರಿ 2024, 23:04 IST
Last Updated 23 ಜನವರಿ 2024, 23:04 IST
   

ಅಲ್ ಖೋರ್ (ಕತಾರ್‌): ಎಎಫ್‌ಸಿ ಏಷ್ಯಾ ಕಪ್‌ ಟೂರ್ನಿಯಲ್ಲಿ ಮಂಗಳವಾರ ಸಿರಿಯಾ ವಿರುದ್ಧ 0-1 ರಿಂದ ಭಾರತ ಪರಾಭವಗೊಂಡಿದೆ. 

ಗುಂಪಿನಲ್ಲಿ ಆಡಿದ ಮೂರು ಪಂದ್ಯಗಳನ್ನು ಸೋತ ನಂತರ ಸುನಿಲ್ ಚೆಟ್ರಿ ಬಳಗ ಏಷ್ಯಕಪ್ ಟೂರ್ನಿಯಿಂದ ಹೊರ ಬಿದ್ದಿದೆ. ನಾಕ್‌ಔಟ್‌ ಪ್ರವೇಶಕ್ಕೆ ಇದ್ದ ಅವಕಾಶವನ್ನು ಜೀವಂತವಾಗಿರಿಸಲು ಸಿರಿಯಾ ವಿರುದ್ಧ ಪಂದ್ಯವನ್ನು ಭಾರತ ಗೆಲ್ಲಲೇಬೇಕಿತ್ತು. 

ಬದಲಿ ಆಟಗಾರ ಒಮರ್ ಖ್ರ್ಬಿನ್  76ನೇ ನಿಮಿಷದಲ್ಲಿ ಗಳಿಸಿದ ಗೋಲಿನಿಂದ ಸಿರಿಯಾ ನಾಕೌಟ್ ಸುತ್ತಿಗೆ ಪ್ರವೇಶಿಸಿತು.

ADVERTISEMENT

ಆಸ್ಟ್ರೇಲಿಯಾ ವಿರುದ್ಧ 0–2 ಸೋತ್ತಿದ್ದ ಭಾರತ, ನಂತರ 0–3 ರಿಂದ ಉಜ್ಬೇಕಿಸ್ತಾನ ಎದುರೂ ಪರಾಜಯ ಕಂಡಿತ್ತು. ಆಡಿರುವ ಮೂರೂ ಪಂದ್ಯಗಳಲ್ಲಿ ಯಾವುದೇ ಗೋಲು ಗಳಿಸದೆ ಸೋತಿರುವ ಭಾರತ 'ಬಿ' ಗುಂಪಿನಲ್ಲಿ ಕೊನೆಯ ಸ್ಥಾನದಲ್ಲಿದೆ.

ಫಿಫಾ ವಿಶ್ವ ಕ್ರಮಾಂಕದಲ್ಲಿ ಭಾರತ 102ನೇ ಸ್ಥಾನದಲ್ಲಿದೆ. ಈ ಹಿಂದೆ ಭಾರತ 1984, 2011 ಮತ್ತು 2019ರಲ್ಲಿ ನಾಕೌಟ್‌ ಸುತ್ತಿಗೆ ಪ್ರವೇಶಿಸುವಲ್ಲಿ ವಿಫಲವಾಗಿತ್ತು. 1964ರಲ್ಲಿ ಕಾಂಟಿನೆಂಟಲ್ ಪಂದ್ಯಾವಳಿಯಲ್ಲಿ ಕೇವಲ ನಾಲ್ಕು ತಂಡಗಳು ‍‍‍ಪಾಲ್ಗೊಂಡಿದ್ದಾಗ  ಭಾರತ ರನ್ನರ್ ಅಪ್ ಆಗಿತ್ತು. 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.