ನವದೆಹಲಿ: ಹೀರೋ ಇಂಟರ್‌ನ್ಯಾಷನಲ್ ಕಪ್ ಫುಟ್‌ಬಾಲ್ ಟೂರ್ನಿಯ ಮೊದಲ ಪಂದ್ಯದಲ್ಲಿ ಭಾರತ ತಜಿಕಿಸ್ತಾನದ ಸವಾಲು ಎದುರಿಸಲಿದೆ. ಅಹ್ಮದಾಬಾದ್‌ನಲ್ಲಿ ಜುಲೈ 7ರಿಂದ 18ರವರೆಗೆ ಟೂರ್ನಿ ನಡೆಯಲಿದೆ.
ಜುಲೈ 7ರಂದು ತಜಕಿಸ್ತಾನದ ಎದುರು ಆಡಿದ ಬಳಿಕ, ಜುಲೈ 13ರಂದು ಉತ್ತರ ಕೊರಿಯಾ ಹಾಗೂ 16ರಂದು ಸಿರಿಯಾ ವಿರುದ್ಧ ಭಾರತ ಕಣಕ್ಕಿಳಿಯಲಿದೆ.
ರೌಂಡ್ ರಾಬಿನ್ ಮಾದರಿಯಲ್ಲಿ ನಡೆಯುವ ಪಂದ್ಯಾವಳಿಯಲ್ಲಿ ಮೊದಲ ಎರಡು ಸ್ಥಾನ ಪಡೆಯುವ ಎರಡು ತಂಡಗಳು ಜುಲೈ 18ರಂದು ನಡೆಯುವ ಫೈನಲ್ ಪಂದ್ಯದಲ್ಲಿ ಮುಖಾಮುಖಿಯಾಗುವವು.
ಎಪ್ರಿಲ್‌ನಲ್ಲಿ ಬಿಡುಗಡೆಯಾಗಿರುವ ಫಿಫಾ ರ‍್ಯಾಂಕಿಂಗ್ ಪ್ರಕಾರ ಸಿರಿಯಾ 83ನೇ ಸ್ಥಾನದಲ್ಲಿದೆ. ತಜಿಕಿಸ್ತಾನ ಹಾಗೂ ಉತ್ತರ ಕೊರಿಯಾದ ಸ್ಥಾನಗಳು ಕ್ರಮವಾಗಿ 120 ಹಾಗೂ 121.
ಭಾರತ 101ನೇ ಸ್ಥಾನದಲ್ಲಿರುವ ಭಾರತ ಹೋದ ವರ್ಷ ಈ ಟೂರ್ನಿಯ ಚಾಂಪಿಯನ್ ಆಗಿತ್ತು. ಫೈನಲ್ ಪಂದ್ಯದಲ್ಲಿ ಕೀನ್ಯಾ ತಂಡವನ್ನು ಸೋಲಿಸಿತ್ತು.
ಕಿಂಗ್ಸ್ ಕಪ್ ಟೂರ್ನಿಯಲ್ಲಿ ಆಡಿದ ಭರವಸೆಯ ಆಟವನ್ನು ಬೆನ್ನಿಗಂಟಿಸಿಕೊಂಡು ಭಾರತ ಈಗ ಹೀರೊ ಇಂಟರ್‌ನ್ಯಾಷನಲ್ ಕಪ್ ಟೂರ್ನಿಗೆ ಸಿದ್ಧವಾಗಲಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.