ADVERTISEMENT

ಮಹಿಳಾ ಫುಟ್‌ಬಾಲ್‌: ಸುಲಭದ ತುತ್ತಾದ ನೇಪಾಳ

ಪಿಟಿಐ
Published 20 ಆಗಸ್ಟ್ 2025, 14:08 IST
Last Updated 20 ಆಗಸ್ಟ್ 2025, 14:08 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಥಿಂಪು: ಶಿಸ್ತುಬದ್ಧ ಆಟವಾಡಿದ ಭಾರತ ತಂಡ ಸ್ಯಾಫ್‌ 17 ವರ್ಷದೊಳಗಿನ ಮಹಿಳಾ ಫುಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಬುಧವಾರ ನೇಪಾಳ ತಂಡವನ್ನು 7–0 ಗೋಲುಗಳಿಂದ ಸೋಲಿಸಿ ಶುಭಾರಂಭ ಮಾಡಿತು.

ನಿರಾ ಚಾನು ಲಾಂಗ್ಜಮ್‌ (25, 56ನೇ ನಿಮಿಷ), ಅಭಿಷ್ಟಾ ಬಸ್ನೆಟ್‌ (16, 41ನೇ ನಿಮಿಷ), ಅನುಷ್ಕಾ ಕುಮಾರಿ (37, 62ನೇ ನಿಮಿಷ) ಮತ್ತು ಜೂಲನ್ ನೊಂಗಮೈಥೆಮ್‌ (45+1) ಅವರು ಭಾರತ ತಂಡದ ಪರ ಗೋಲುಗಳನ್ನು ಗಳಿಸಿದರು.

ADVERTISEMENT

ವಿರಾಮದ ವೇಳೆಗೇ ಭಾರತ 5–0 ಗೋಲುಗಳಿಂದ ಮುಂದಿತ್ತು. ಈ ಬಾರಿ ಚಾಂಪಿಯನ್‌ಷಿಪ್‌ ಡಬಲ್‌ ರೌಂಡ್‌ರಾಬಿನ್ ಮಾದರಿಯಲ್ಲಿ  ನಡೆಯುತ್ತಿರುವ ಕಾರಣ ಪ್ರತಿಯೊಂದು ಗೆಲುವು ಮಹತ್ವದ್ದಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.