ADVERTISEMENT

ಫುಟ್‌ಬಾಲ್‌: ಒಮನ್‌ ಎದುರಿನ ಪಂದ್ಯದಲ್ಲಿ ಭಾರತಕ್ಕೆ ನಿರಾಸೆ

ಪಿಟಿಐ
Published 20 ಆಗಸ್ಟ್ 2018, 17:10 IST
Last Updated 20 ಆಗಸ್ಟ್ 2018, 17:10 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ನವದೆಹಲಿ: ಹದಿನಾರು ವರ್ಷದೊಳಗಿನವರ ಭಾರತ ಫುಟ್‌ಬಾಲ್‌ ತಂಡವು ಟರ್ಕಿಯಲ್ಲಿ ನಡೆದ ಒಮನ್‌ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ನಿರಾಸೆ ಅನುಭವಿಸಿದೆ.

ಸೋಮವಾರ ನಡೆದ ಪಂದ್ಯದಲ್ಲಿ ಭಾರತ ತಂಡವು 1–2 ಗೋಲುಗಳಿಂದ ಒಮನ್‌ ಎದುರು ಮಣಿಯಿತು.

ಪಂದ್ಯದ ಆರಂಭದಿಂದಲೂ ಉಭಯ ತಂಡಗಳು ಉತ್ತಮ ಪೈಪೋಟಿ ನಡೆಸಿದವು. ಆದರೆ, ಮೊದಲಾರ್ಧದ ಅಂತ್ಯಕ್ಕೆ ಒಮನ್‌ ತಂಡವು ಗೋಲು ಗಳಿಸಿ ಮುನ್ನಡೆ ಹೊಂದಿತು. ದ್ವಿತೀಯಾರ್ಧದಲ್ಲಿಯೂ ಆಕ್ರಮಣಕಾರಿ ಆಟವಾಡಿತು. 53ನೇ ನಿಮಿಷದಲ್ಲಿ ಅದು ಎರಡನೇ ಗೋಲು ದಾಖಲಿಸಿ ಮುನ್ನಡೆಯನ್ನು 2–0ಗೆ ಹೆಚ್ಚಿಸಿಕೊಂಡಿತು.

ADVERTISEMENT

ನಂತರ, ಭಾರತ ತಂಡ ಹಲವು ಬಾರಿ ಗೋಲು ಗಳಿಸಲು ಯತ್ನಿಸಿತು. ಆದರೆ, ಎದುರಾಳಿ ತಂಡದ ರಕ್ಷಣಾ ಪಡೆಯ ಆಟಗಾರರು ಅದಕ್ಕೆ ಅವಕಾಶ ನೀಡಲಿಲ್ಲ. ಅವರ ಎಚ್ಚರಿಕೆಯ ಆಟಕ್ಕೆ ಪ್ರತಿತಂತ್ರ ಹೆಣೆಯಲು ಭಾರತಕ್ಕೆ ಸಾಧ್ಯವಾಗಲಿಲ್ಲ. ಪಂದ್ಯದ ಹೆಚ್ಚುವರಿ ಅವಧಿಯಲ್ಲಿ ಭಾರತಕ್ಕೆ ಪೆನಾಲ್ಟಿ ಅವಕಾಶ ಸಿಕ್ಕಿತು. ಈ ಅವಕಾಶವನ್ನು ವಿಕ್ರಮ್‌ ಅವರು ಸದುಪಯೋಗಪಡಿಸಿಕೊಂಡರು. ಅವರು ಹಿನ್ನಡೆಯನ್ನು 2–1ಕ್ಕೆ ತಗ್ಗಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.