ADVERTISEMENT

ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಭರ್ಜರಿ ಜಯ

ಪಿಟಿಐ
Published 7 ಫೆಬ್ರುವರಿ 2023, 2:50 IST
Last Updated 7 ಫೆಬ್ರುವರಿ 2023, 2:50 IST
ಪ್ರಾತಿನಿಧಿಕ ಚಿತ್ರ
ಪ್ರಾತಿನಿಧಿಕ ಚಿತ್ರ   

ಜರ್ಕಾ, ಜೋರ್ಡನ್: ಶಿಲ್ಜಿ ಶಾಜಿ ಅವರ ಕಾಲ್ಚಳಕದ ನೆರವಿನಿಂದ ಭಾರತ ಜೂನಿಯರ್‌ (17 ವರ್ಷದೊಳಗಿನ) ಮಹಿಳೆಯರ ತಂಡದವರು ಸ್ನೇಹಪರ ಫುಟ್‌ಬಾಲ್‌ ಪಂದ್ಯದಲ್ಲಿ ಜೋರ್ಡನ್‌ ತಂಡವನ್ನು 7–0 ಗೋಲುಗಳಿಂದ ಮಣಿಸಿದರು.

ಶಿಲ್ಜಿ ಅವರು ಭಾನುವಾರ ನಡೆದ ಪಂದ್ಯದ 4, 37, 74 ಮತ್ತು 76ನೇ ನಿಮಿಷದಲ್ಲಿ ಗೋಲು ಗಳಿಸಿದರು. ಇತರ ಗೋಲುಗಳನ್ನು ಮನೀಷಾ ಕುಮಾರಿ (13), ಪೂಜಾ (18) ಹಾಗೂ ಸಂಜನಾ (90+1) ತಂದಿತ್ತರು.

ಉಭಯ ತಂಡಗಳ ನಡುವಿನ ಎರಡನೇ ಪಂದ್ಯ ಗುರುವಾರ ನಡೆಯಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.