ADVERTISEMENT

AFC U17 Asian Cup: ಭಾರತ ಬಾಲಕರ ತಂಡ ಅರ್ಹತೆ

ಪಿಟಿಐ
Published 30 ನವೆಂಬರ್ 2025, 20:11 IST
Last Updated 30 ನವೆಂಬರ್ 2025, 20:11 IST
<div class="paragraphs"><p>ಫುಟ್‌ಬಾಲ್</p></div>

ಫುಟ್‌ಬಾಲ್

   

ಅಹಮದಾಬಾದ್‌: ‌ಭಾರತ ಬಾಲಕರ ಫುಟ್‌ಬಾಲ್‌ ತಂಡವು ಭಾನುವಾರ ನಡೆದ ಡಿ ಗುಂಪಿನ ಅರ್ಹತಾ ಪಂದ್ಯದಲ್ಲಿ 2–1 ಗೋಲುಗಳಿಂದ ಇರಾನ್‌ ತಂಡವನ್ನು ಮಣಿಸಿ 2026ರ ಎಎಫ್‌ಸಿ 17 ವರ್ಷ ದೊಳಗಿನವರ ಏಷ್ಯನ್‌ ಕಪ್‌ ಟೂರ್ನಿಗೆ ಟಿಕೆಟ್‌ ಪಡೆದುಕೊಂಡಿತು.‌

‌ಏಷ್ಯನ್‌ ಕಪ್‌ ಟೂರ್ನಿಯು ಮುಂದಿನ ವರ್ಷ ಸೌದಿ ಅರೇಬಿಯಾದಲ್ಲಿ ನಡೆಯಲಿದ್ದು, ಭಾರತ ತಂಡವು 10ನೇ ಬಾರಿ ಸ್ಪರ್ಧಿಸಲಿದೆ.

ADVERTISEMENT

ನಾಲ್ಕು ಪಂದ್ಯಗಳ ಪೈಕಿ ಎರಡನ್ನು ಗೆದ್ದು, ಒಂದರಲ್ಲಿ ಡ್ರಾ ಸಾಧಿಸಿದ ಭಾರತ ತಂಡವು 7 ಅಂಕಗಳೊಂದಿಗೆ ಡಿ ಗುಂಪಿನಲ್ಲಿ ಅಗ್ರಸ್ಥಾನ ಪಡೆಯಿತು. ಇರಾನ್‌ ಎರಡನೇ ಸ್ಥಾನದೊಂದಿಗೆ ಟೂರ್ನಿಯಿಂದ ಹೊರಬಿತ್ತು

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.