ಪ್ರಾತಿನಿಧಿಕ ಚಿತ್ರ
ನವದೆಹಲಿ: ಭಾರತ ಯೂತ್ (20 ವರ್ಷದೊಳಗಿನವರ) ವನಿತೆಯರ ತಂಡವು ಇದೇ 13 ಮತ್ತು 16ರಂದು ತಾಷ್ಕೆಂಟ್‌ನಲ್ಲಿ ಉಜ್ಬೇಕಿಸ್ತಾನದ ವಿರುದ್ಧ ಎರಡು ಸೌಹಾರ್ದ ಪಂದ್ಯಗಳನ್ನು ಆಡಲಿದೆ ಎಂದು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್ ಗುರುವಾರ ತಿಳಿಸಿದೆ.
ಆಗಸ್ಟ್ 6ರಿಂದ 10ರವರೆಗೆ ಮ್ಯಾನ್ಮಾರ್‌ನಲ್ಲಿ ನಡೆಯಲಿರುವ ಎಎಫ್‌ಸಿ (20 ವರ್ಷದೊಳಗಿನವರ) ಮಹಿಳಾ ಏಷ್ಯನ್ ಕಪ್ ಅರ್ಹತಾ ಟೂರ್ನಿಯ ಸಿದ್ಧತೆಯ ಭಾಗವಾಗಿ ಈ ಪಂದ್ಯಗಳು ನಡೆಯಲಿವೆ.
ಏಷ್ಯನ್ ಕಪ್ ಅರ್ಹತಾ ಟೂರ್ನಿಯಲ್ಲಿ ಭಾರತವು ಆ.6ರಂದು ಇಂಡೊನೇಷ್ಯಾ ವಿರುದ್ಧ, 8ರಂದು ತುರ್ಕಮೆನಿಸ್ತಾನ್ ವಿರುದ್ಧ, 10ರಂದು ಮ್ಯಾನ್ಮಾರ್ ವಿರುದ್ಧ ಪಂದ್ಯಗಳನ್ನು ಆಡಲಿವೆ. ಎಂಟು ಗುಂಪುಗಳಲ್ಲಿ ಅಗ್ರಸ್ಥಾನ ಪಡೆಯುವ ತಂಡಗಳು ಮತ್ತು ಮೂರು ಅತ್ಯುತ್ತಮ ರನ್ನರ್ ಅಪ್ ತಂಡಗಳು ಮುಂದಿನ ವರ್ಷ ಥಾಯ್ಲೆಂಡ್‌ನಲ್ಲಿ ನಡೆಯುವ ಟೂರ್ನಿಗೆ ಅರ್ಹತೆ ಪಡೆಯಲಿವೆ.
ಗುರುವಾರ ಬೆಂಗಳೂರಿನಿಂದ ಹೊರಟ 24 ಆಟಗಾರ್ತಿಯರ ತಂಡವನ್ನು ಕೋಚ್ ಜೋಕಿಂ ಅಲೆಕ್ಸಾಂಡರ್ಸನ್ ಪ್ರಕಟಿಸಿದ್ದಾರೆ. ತಂಡದಲ್ಲಿ ಗೋಲ್‌ಕೀಪರ್ ಮೊನಾಲಿಶಾ ದೇವಿ ಸ್ಥಾನ ಪಡೆದಿದ್ದಾರೆ. ಅವರು 2026ರ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ಗೆ ಐತಿಹಾಸಿಕ ಅರ್ಹತೆ ಪಡೆದ ಸೀನಿಯರ್ ತಂಡದಲ್ಲೂ ಅವರಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.