ಫುಟ್‌ಬಾಲ್
ಕೊಲಂಬೊ: ಭಾರತ ತಂಡವು ಶನಿವಾರ ಪೆನಾಲ್ಟಿ ಶೂಟೌಟ್‌ನಲ್ಲಿ 4–1ರಿಂದ ಬಾಂಗ್ಲಾದೇಶ ತಂಡವನ್ನು ಮಣಿಸಿ, ಏಳನೇ ಬಾರಿಗೆ ಸ್ಯಾಫ್ 17 ವರ್ಷದೊಳಗಿನವರ ಫುಟ್‌ಬಾಲ್ ಚಾಂಪಿಯನ್‌ಷಿಪ್ ಪ್ರಶಸ್ತಿ ಗೆದ್ದುಕೊಂಡಿತು.
ತೀವ್ರ ಪೈಪೋಟಿಯಿಂದ ಕೂಡಿದ್ದ ಫೈನಲ್ ಪಂದ್ಯದಲ್ಲಿ ಉಭಯ ತಂಡಗಳು ನಿಗದಿತ ಅವಧಿಯಲ್ಲಿ 2–2 ಸಮಬಲ ಸಾಧಿಸಿದ್ದವು.
ಪೆನಾಲ್ಟಿ ಶೂಟೌಟ್‌ನಲ್ಲಿ ಭಾರತದ ದಲ್ಲಾಲ್‌ಮುವಾನ್ ಗಾಂಗ್ಟೆ, ಕೊರೂ ಮೈತೇಯಿ ಕೊಂಥೌಜಂ, ಇಂದ್ರ ರಾಣಾ ಮಗರ್ ಹಾಗೂ ಶುಭಂ ಪೂನಿಯಾ ಅವರು ಚೆಂಡನ್ನು ಗುರಿತಲುಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.