ADVERTISEMENT

ಫುಟ್‌ಬಾಲ್‌: ಭಾರತ ಮಹಿಳಾ ತಂಡಕ್ಕೆ ಜಯ

ಪಿಟಿಐ
Published 23 ಫೆಬ್ರುವರಿ 2026, 16:12 IST
Last Updated 23 ಫೆಬ್ರುವರಿ 2026, 16:12 IST
   

ನವದೆಹಲಿ: ಭಾರತದ ಸೀನಿಯರ್ ಮಹಿಳಾ ತಂಡ, ಆಸ್ಟ್ರೇಲಿಯಾದ ಪರ್ತ್‌ನ ಮ್ಯಾಸಿಡೋನಿಯಾ ಪಾರ್ಕ್‌ನಲ್ಲಿ  ಸೋಮವಾರ ನಡೆದ ಸೌಹಾರ್ದ ಫುಟ್‌ಬಾಲ್ ಪಂದ್ಯದಲ್ಲಿ ಪರ್ತ್‌ ಅಝ್ಝರಿ ತಂಡವನ್ನು 7–2 ಗೋಲುಗಳಿಂದ ಸೋಲಿಸಿತು.

ಭಾರತ ತಂಡದ ಪರ ಡಾಂಗ್ಮಿ ಗ್ರೇಸ್‌ ಮತ್ತು ಸಂಗೀತಾ ಬಾಸ್ಫೋರೆ ತಲಾ ಎರಡು ಗೋಲು ಗಳಿಸಿದರೆ, ರಿಂಪಾ ಹಲ್ದರ್, ಬಬಿನಾ ದೇವಿ ಲಿಶಮ್, ಕವಿಯಾ ಪಕ್ಕೀರಿಸಾಮಿ ತಲಾ ಒಂದು ಗೋಲು ಗಳಿಸಿದರು.

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಎಎಫ್‌ಸಿ ಮಹಿಳಾ ಏಷ್ಯನ್ ಕಪ್‌ಗೆ ಸಜ್ಜಾಗಲು ಭಾರತ ಈ ಟೂರ್ನಿಯಲ್ಲಿ ಆಡುತ್ತಿದೆ. ಗುಂಪು ಹಂತದಲ್ಲಿ ಭಾರತ ಮಾರ್ಚ್‌ 4ರಂದು ವಿಯೆಟ್ನಾಂ ವಿರುದ್ಧ, 7ರಂದು ಜಪಾನ್ ವಿರುದ್ಧ (ಪರ್ತ್‌ನಲ್ಲಿ) ಮತ್ತು 10ರಂದು ತೈವಾನ್ ವಿರುದ್ಧ (ಸಿಡ್ನಿಯಲ್ಲಿ) ಆಡಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.