ADVERTISEMENT

ಏಷ್ಯಾಕಪ್‌ಗೆ ಭಾರತ ಫುಟ್‌ಬಾಲ್‌ ತಂಡ ಪ್ರಕಟ

ಪಿಟಿಐ
Published 27 ಡಿಸೆಂಬರ್ 2018, 18:46 IST
Last Updated 27 ಡಿಸೆಂಬರ್ 2018, 18:46 IST
ಸುನಿಲ್‌ ಚೆಟ್ರಿ (ಎಡ) ಮತ್ತು ಜೆಜೆ ಲಾಲ್‌ಪೆಕ್ಲುವಾ
ಸುನಿಲ್‌ ಚೆಟ್ರಿ (ಎಡ) ಮತ್ತು ಜೆಜೆ ಲಾಲ್‌ಪೆಕ್ಲುವಾ   

ಅಬುಧಾಬಿ: ಭಾರತ ಫುಟ್‌ಬಾಲ್‌ ತಂಡದ ಮುಖ್ಯ ಕೋಚ್‌ ಸ್ಟೀಫನ್ ಕಾನ್ಸ್‌ಟೆಂಟೈನ್‌ ಅವರು ಮುಂಬರುವ ಎಎಫ್‌ಸಿ ಏಷ್ಯಾಕಪ್‌ ಫುಟ್‌ಬಾಲ್‌ ಟೂರ್ನಿಗೆ ಗುರುವಾರ 23 ಸದಸ್ಯರ ತಂಡವನ್ನು ಪ್ರಕಟಿಸಿದ್ದಾರೆ.

ಏಷ್ಯಾಕಪ್‌ ಟೂರ್ನಿ ಜನವರಿ 5ರಿಂದ ಫೆಬ್ರುವರಿ 1ರವರೆಗೆ ಯುನೈಟೆಡ್‌ ಅರಬ್‌ ಎಮಿರೇಟ್ಸ್‌ನಲ್ಲಿ (ಯುಎಇ) ನಡೆಯಲಿದೆ.

ಜನವರಿ ಆರರಂದು ನಡೆಯುವ ತನ್ನ ಮೊದಲ ಪಂದ್ಯದಲ್ಲಿ ಭಾರತ ತಂಡ ಥಾಯ್ಲೆಂಡ್‌ ಎದುರು ಸೆಣಸಲಿದೆ. ನಂತರದ ಹೋರಾಟಗಳಲ್ಲಿ ಆತಿಥೇಯ ಯುಎಇ (ಜ.10) ಮತ್ತು ಬಹ್ರೇನ್‌ (ಜ.14) ತಂಡಗಳ ಸವಾಲು ಎದುರಿಸಲಿದೆ.

ADVERTISEMENT

‘ಏಷ್ಯಾಕಪ್‌ನಲ್ಲಿ ಶ್ರೇಷ್ಠ ಸಾಮರ್ಥ್ಯ ತೋರುವುದು ನಮ್ಮ ಗುರಿ. ಈಗ ಪ್ರಕಟಿಸಲಾಗಿರುವ ತಂಡದಲ್ಲಿ ಯುವ ಮತ್ತು ಅನುಭವಿ ಆಟಗಾರರಿದ್ದಾರೆ. ಟೂರ್ನಿಯಲ್ಲಿ ಭಾಗವಹಿಸುವ ಬಲಿಷ್ಠ ತಂಡಗಳನ್ನು ಮಣಿಸುವ ಸಾಮರ್ಥ್ಯ ನಮ್ಮ ತಂಡಕ್ಕಿದೆ’ ಎಂದು ಸ್ಟೀಫನ್‌ ಕಾನ್ಸ್‌ಟೆಂಟೈನ್‌ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ತಂಡ ಇಂತಿದೆ: ಗೋಲ್‌ಕೀಪರ್‌ಗಳು: ಗುರುಪ್ರೀತ್‌ ಸಿಂಗ್‌ ಸಂಧು, ವಿಶಾಲ್‌ ಕೈತ್‌ ಮತ್ತು ಅಮರಿಂದರ್‌ ಸಿಂಗ್‌.

ಡಿಫೆಂಡರ್‌ಗಳು: ಪ್ರೀತಮ್‌ ಕೋಟಾಲ್‌, ಸಾರ್ಥಕ್‌ ಗೋಲುಯಿ, ಸಂದೇಶ್‌ ಜಿಂಗಾನ್‌, ಅನಾಸ್‌ ಎಡತೋಡಿಕಾ, ಸಲಾಮ್‌ ರಂಜನ್‌ ಸಿಂಗ್‌, ಸುಭಾಶಿಶ್‌ ಬೋಸ್‌ ಮತ್ತು ನಾರಾಯಣ ದಾಸ್‌.

ಮಿಡ್‌ಫೀಲ್ಡರ್‌ಗಳು: ಉದಾಂತ್‌ ಸಿಂಗ್‌, ಜಾಕಿಚಂದ್‌ ಸಿಂಗ್‌, ಜರ್ಮನ್‌ಪ್ರೀತ್‌ ಸಿಂಗ್‌, ಪ್ರಣಯ್‌ ಹಲ್ದಾರ್‌, ಅನಿರುದ್ಧ್‌ ಥಾಪಾ, ವಿನಿತ್‌ ರಾಯ್‌, ರೌಲಿನ್‌ ಬೊರ್ಗೆಸ್‌, ಆಶಿಕ್‌ ಕುರುನಿಯಾನ್‌ ಮತ್ತು ಹಲಿಚರಣ್‌ ನರ್ಜರಿ.

ಫಾರ್ವರ್ಡ್‌ಗಳು: ಸುನಿಲ್‌ ಚೆಟ್ರಿ, ಸುಮೀತ್‌ ಪಸ್ಸಿ, ಬಲವಂತ್‌ ಸಿಂಗ್‌ ಮತ್ತು ಜೆಜೆ ಲಾಲ್‌ಪೆಕ್ಲುವಾ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.