ADVERTISEMENT

ಫುಟ್‌ಬಾಲ್‌ | ರಾಲ್ಟೆ, ಪ್ರತೀಕ್ ಜೊತೆ ಬಿಎಫ್‌ಸಿ ಒಪ್ಪಂದ

​ಪ್ರಜಾವಾಣಿ ವಾರ್ತೆ
Published 4 ಜೂನ್ 2020, 19:30 IST
Last Updated 4 ಜೂನ್ 2020, 19:30 IST
ಲಾಲ್ತುಮಾವಿಯಾ ರಾಲ್ಟೆ
ಲಾಲ್ತುಮಾವಿಯಾ ರಾಲ್ಟೆ   

ಬೆಂಗಳೂರು: ಇಂಡಿಯನ್‌ ಸೂಪರ್‌ ಲೀಗ್‌ (ಐಎಸ್‌ಎಲ್‌) 2020–21ನೇ ಸಾಲಿನ ಫುಟ್‌ಬಾಲ್‌ ಟೂರ್ನಿಗೆ ತಂಡವನ್ನು ಮತ್ತಷ್ಟು ಬಲಪಡಿಸಲು ಮುಂದಾಗಿರುವ ಬೆಂಗಳೂರು ಫುಟ್‌ಬಾಲ್‌ ಕ್ಲಬ್ (ಬಿಎಫ್‌ಸಿ)‌ ತಂಡವು ಅನುಭವಿ ಡಿಫೆಂಡರ್‌ ಪ್ರತೀಕ್ ಚೌಧರಿ ಹಾಗೂ ಗೋಲ್‌ಕೀಪರ್‌ ಲಾಲ್ತುಮಾವಿಯಾ ರಾಲ್ಟೆ ಅವರೊಂದಿಗೆ ಒಪ್ಪಂದ ಮಾಡಿಕೊಂಡಿದೆ.

ಇವರು ಮುಂದಿನ ಎರಡು ವರ್ಷಗಳ ಕಾಲ ತಂಡದ ಭಾಗವಾಗಿರಲಿದ್ದಾರೆ. ಪ್ರತೀಕ್‌ ಅವರು ಹಿಂದಿನ ಆವೃತ್ತಿಯ ಐಎಸ್‌ಎಲ್‌ನಲ್ಲಿ ಮುಂಬೈ ಸಿಟಿ ಎಫ್‌ಸಿ ಪರ ಆಡಿದ್ದರು. ರಾಲ್ಟೆ ಅವರು 2014ರಿಂದ 2018ರವರೆಗೂ ಬಿಎಫ್‌ಸಿಯಲ್ಲೇ ಇದ್ದರು.

30 ವರ್ಷ ವಯಸ್ಸಿನ ಪ್ರತೀಕ್‌ ಅವರು ಕೇರಳ ಬ್ಲಾಸ್ಟರ್ಸ್‌, ಡೆಲ್ಲಿ ಡೈನಾಮೊಸ್‌ ಹಾಗೂ ಜೆಮ್‌ಶೆಡ್‌ಪುರ ಎಫ್‌ಸಿ ಕ್ಲಬ್‌ಗಳ ಪರವೂ ಆಡಿದ್ದರು. ಐ ಲೀಗ್‌ ಕ್ಲಬ್‌ಗಳಾದ ಮೋಹನ್‌ ಬಾಗನ್‌, ಮುಂಬೈ ಎಫ್‌ಸಿ, ರಂಗ್‌ದಜೀದ್‌ ಪರ ಆಡಿದ ಅನುಭವವೂ ಅವರಿಗಿದೆ.

ADVERTISEMENT

27 ವರ್ಷ ವಯಸ್ಸಿನ ರಾಲ್ಟೆ, ನಾರ್ತ್‌ಈಸ್ಟ್‌ ಯುನೈಟೆಡ್‌, ಎಫ್‌ಸಿ ಗೋವಾ, ಕೇರಳ ಬ್ಲಾಸ್ಟರ್ಸ್‌ ತಂಡಗಳ ಪರ ಆಡಿ ಸೈ ಎನಿಸಿಕೊಂಡಿದ್ದರು. ಹೋದ ವರ್ಷದ ಐ ಲೀಗ್‌ನಲ್ಲಿ ಅವರು ಈಸ್ಟ್‌ ಬೆಂಗಾಲ್‌ ಎಫ್‌ಸಿ ತಂಡವನ್ನು ಪ್ರತಿನಿಧಿಸಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.