ADVERTISEMENT

ಐಎಸ್‌ಎಲ್: ಬಿಎಫ್‌ಸಿಗೆ ಮತ್ತೊಂದು ಡ್ರಾ ಪಂದ್ಯ

​ಪ್ರಜಾವಾಣಿ ವಾರ್ತೆ
Published 8 ಡಿಸೆಂಬರ್ 2020, 20:02 IST
Last Updated 8 ಡಿಸೆಂಬರ್ 2020, 20:02 IST
ಲೂಯಿಸ್ ಮಚಾದೊ– ಐಎಸ್‌ಎಲ್ ಮೀಡಿಯಾ ಚಿತ್ರ
ಲೂಯಿಸ್ ಮಚಾದೊ– ಐಎಸ್‌ಎಲ್ ಮೀಡಿಯಾ ಚಿತ್ರ   

ಫತೋರ್ಡಾ: ನಾರ್ತ್‌ ಈಸ್ಟ್ ಯುನೈ ಟೆಡ್ ತಂಡದ ಲೂಯಿಸ್ ಮಚಾದೊ ಅವರಿಂದಾಗಿ ಬೆಂಗಳೂರು ಫುಟ್‌ಬಾಲ್ ಕ್ಲಬ್‌ ತಂಡ ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್ ಟೂರ್ನಿಯಲ್ಲಿ ಮೂರನೇ ಡ್ರಾಗೆ ಸಮಾಧಾನಪಟ್ಟುಕೊಳ್ಳಬೇಕಾ ಯಿತು. ಮಂಗಳವಾರ ಇಲ್ಲಿ ನಡೆದ ಪಂದ್ಯವು 2–2ರಿಂದ ಸಮವಾಯಿತು.

ಸುನಿಲ್ ಚೆಟ್ರಿ ಬಳಗ ಆರಂಭ ದಿಂದಲೂ ಉತ್ತಮವಾಗಿ ಆಡಿತು. ಆದರೆ ನಾಲ್ಕನೇ ನಿಮಿಷದಲ್ಲಿ ನಾರ್ತ್‌ ಈಸ್ಟ್‌ ಗೋಲಿನ ಖಾತೆ ತೆರೆಯಿತು.

ಹತ್ತು ನಿಮಿಷಗಳ ನಂತರ ಬಿಎಫ್‌ಸಿಯ ಯುವಾನನ್ ತಿರುಗೇಟು ನೀಡಿದರು. 70ನೇ ನಿಮಿಷದಲ್ಲಿ ಉದಾಂತ ಸಿಂಗ್ ಬಿಎಫ್‌ಸಿಯ ಮುನ್ನಡೆ ಹೆಚ್ಚಿಸಿದರು. 78ನೇ ನಿಮಿಷದಲ್ಲಿ ಮಚಾದೊ ಬಿಎಫ್‌ಸಿಯಿಂದ ಜಯದ ಅವಕಾಶ ಕಿತ್ತುಕೊಂಡಿತು.

ADVERTISEMENT

ಮುಂಬೈ–ಚೆನ್ನೈಯಿನ್ ಹಣಾಹಣಿ: ಬುಧವಾರ ಬ್ಯಾಂಬೋಲಿಮ್‌ನಲ್ಲಿ ನಡೆ ಯಲಿರುವ ಪಂದ್ಯದಲ್ಲಿ ಮುಂಬೈ ಸಿಟಿ ಎಫ್‌ಸಿ ಮತ್ತು ಚೆನ್ನೈಯಿನ್ ಎಫ್‌ಸಿ ತಂಡಗಳು ಸೆಣಸಲಿವೆ.

ಆರಂಭ: ಸಂಜೆ 7.30

ನೇರ ಪ್ರಸಾರ: ಸ್ಟಾರ್‌ ಸ್ಪೋರ್ಟ್ಸ್‌

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.