ADVERTISEMENT

ಐಎಸ್‌ಎಲ್‌: ಮೂವರು ಆಟಗಾರರಿಗೆ ಅಮಾನತು ಶಿಕ್ಷೆ

​ಪ್ರಜಾವಾಣಿ ವಾರ್ತೆ
Published 24 ನವೆಂಬರ್ 2019, 20:17 IST
Last Updated 24 ನವೆಂಬರ್ 2019, 20:17 IST
ಸಿಮಿನ್ಲೆನ್‌ ಡೊಂಗಲ್‌
ಸಿಮಿನ್ಲೆನ್‌ ಡೊಂಗಲ್‌   

ನವದೆಹಲಿ (ಪಿಟಿಐ): ಕ್ರೀಡಾ ಸ್ಫೂರ್ತಿಗೆ ವಿರುದ್ಧವಾಗಿ ನಡೆದುಕೊಂಡಿರುವ ಕಾರಣ ಎಫ್‌ಸಿ ಗೋವಾ ತಂಡದ ಸಿಮಿನ್ಲೆನ್‌ ಡೊಂಗಲ್‌ ಮತ್ತು ಹ್ಯೂಗೊ ಬೌಮಸ್‌ ಹಾಗೂ ನಾರ್ತ್‌ಈಸ್ಟ್‌ ಯುನೈಟೆಡ್‌ ತಂಡದ ಕಾಯ್‌ ಹೀರಿಂಗ್ಸ್‌ ಅವರಿಗೆ ಅಮಾನತು ಶಿಕ್ಷೆ ವಿಧಿಸಲಾಗಿದೆ.

ಅಖಿಲ ಭಾರತ ಫುಟ್‌ಬಾಲ್‌ ಫೆಡರೇಷನ್‌ನ ಶಿಸ್ತು ಸಮಿತಿ ಭಾನುವಾರ ಈ ವಿಷಯ ತಿಳಿಸಿದೆ.

ಇದೇ ತಿಂಗಳ ಒಂದರಂದು ಗುವಾಹಟಿಯಲ್ಲಿ ನಡೆದಿದ್ದ ಇಂಡಿಯನ್‌ ಸೂಪರ್‌ ಲೀಗ್‌ನ (ಐಎಸ್‌ಎಲ್‌) ಗೋವಾ ಮತ್ತು ನಾರ್ತ್‌ಈಸ್ಟ್‌ ನಡುವಣ ಪಂದ್ಯದ ವೇಳೆ ಮೂರೂ ಮಂದಿ ಒರಟು ಆಟ ಆಡಿದ್ದರು. ಹೀಗಾಗಿ ಡೊಂಗಲ್‌ ಅವರನ್ನು ಮೂರು ಪಂದ್ಯ ಅಮಾನತು ಮಾಡಲಾಗಿದೆ. ಹ್ಯೂಗೊ ಮೇಲೆ ಎರಡು ಪಂದ್ಯಗಳ ಅಮಾನತು ಶಿಕ್ಷೆ ಹೇರಲಾಗಿದೆ. ಇವರಿಬ್ಬರೂ ಡಿಸೆಂಬರ್‌ 8ರಂದು ನಡೆಯುವ ಹೈದರಾಬಾದ್‌ ಎಫ್‌ಸಿ ಎದುರಿನ ಪಂದ್ಯದಲ್ಲಿ ಆಡಬಹುದಾಗಿದೆ.

ADVERTISEMENT

ನಾರ್ತ್‌ಈಸ್ಟ್‌ ತಂಡದ ಹೀರಿಂಗ್ಸ್‌ ಮೇಲೂ ಎರಡು ಪಂದ್ಯದ ಅಮಾನತು ಶಿಕ್ಷೆ ಹೇರಲಾಗಿದೆ. ಹೀಗಾಗಿ ಅವರು ಮುಂಬೈ ಸಿಟಿ ಎಫ್‌ಸಿ ಮತ್ತು ಜೆಮ್‌ಶೆಡ್‌ಪುರ ಎಫ್‌ಸಿ ವಿರುದ್ಧದ ಪಂದ್ಯಗಳಲ್ಲಿ ಕಣಕ್ಕಿಳಿಯುವಂತಿಲ್ಲ. ಡಿಸೆಂಬರ್‌ 7ರಂದು ನಡೆಯುವ ಎಟಿಕೆ ಎದುರಿನ ಪಂದ್ಯದಲ್ಲಿ ಅವರು ಆಡಬಹುದು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.