ನವದೆಹಲಿ : ಇಂಡಿಯನ್ ಸೂಪರ್ ಲೀಗ್ ಟೂರ್ನಿಯ ಬಿಕ್ಕಟ್ಟನ್ನು ಶೀಘ್ರ ಬಗೆಹರಿಸದೇ ಹೋದಲ್ಲಿ ಕ್ಲಬ್‌ಗಳನ್ನು ಸಂಪೂರ್ಣವಾಗಿ ಮುಚ್ಚಬೇಕಾಗುವ ಸಂಭವ ಎದುರಾಗಬಹುದು ಎಂದು ಲೀಗ್‌ನ 11 ತಂಡಗಳು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ಗೆ ಎಚ್ಚರಿಕೆ ನೀಡಿವೆ.
ರಾಷ್ಟ್ರೀಯ ಫೆಡರೇಷನ್ ಮತ್ತು ಐಎಸ್‌ಎಲ್ ಆಯೋಜಕರಾದ ಎಫ್‌ಎಸ್‌ಡಿಎಲ್ ನಡುವೆ ಮಾಸ್ಟರ್ ರೈಟ್ಸ್ ಒಪ್ಪಂದ ನವೀಕರಣಗೊಳ್ಳದ ಕಾರಣ ಐಎಸ್‌ಎಲ್ ಭವಿಷ್ಯ ತೂಗುಯ್ಯಾಲೆಯಲ್ಲಿದೆ. ಇದರಿಂದಾಗಿ ಭಾರತದಲ್ಲಿ ವೃತ್ತಿಪರ ಫುಟ್‌ಬಾಲ್ ಅಯೋಮಯಗೊಂಡಿದೆ ಎಂದು ಎಐಎಫ್‌ಎಫ್ ಅಧ್ಯಕ್ಷ ಕಲ್ಯಾಣ್ ಚೌಬೆ ಅವರಿಗೆ ಬರೆದ ಪತ್ರದಲ್ಲಿ ಕ್ಲಬ್‌ಗಳು ಬೇಸರ ವ್ಯಕ್ತಪಡಿಸಿವೆ.
ಪತ್ರಕ್ಕೆ ಬೆಂಗಳೂರು ಎಫ್‌ಸಿ, ಹೈದರಾಬಾದ್ ಎಫ್‌ಸಿ, ಒಡಿಶಾ ಎಫ್‌ಸಿ, ಚೆನ್ನೈಯಿನ್ ಎಫ್‌ಸಿ, ಜಮ್‌ಷೆಡ್‌ಪುರ ಎಫ್‌ಸಿ, ಎಫ್‌ಸಿ ಗೋವಾ, ಕೇರಳ ಬ್ಲಾಸ್ಟರ್ಸ್, ಪಂಜಾಬ್ ಎಫ್‌ಸಿ, ನಾರ್ತ್‌ಈಸ್ಟ್ ಯುನೈಟೆಡ್, ಮುಂಬೈ ಸಿಟಿ ಎಫ್‌ಸಿ ಮತ್ತು ಮೊಹಮಡನ್ ಸ್ಪೋರ್ಟಿಂಗ್ ಸಹಿ ಹಾಕಿವೆ. ಕೋಲ್ಕತ್ತದ ಪ್ರಮುಖ ತಂಡಗಳಾದ ಮೋಹನ್ ಬಾಗನ್ ಸೂಪರ್ ಜೈಂಟ್ ಮತ್ತು ಈಸ್ಟ್ ಬೆಂಗಾಲ್ ಸಹಿ ಹಾಕಿಲ್ಲ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.