ADVERTISEMENT

ವಿಶ್ವಕಪ್ ಫುಟ್‌ಬಾಲ್ ಮುಖ್ಯ ಸುತ್ತಿಗೆ ಜಪಾನ್‌

ಏಜೆನ್ಸೀಸ್
Published 25 ಮಾರ್ಚ್ 2022, 19:45 IST
Last Updated 25 ಮಾರ್ಚ್ 2022, 19:45 IST
ಗೋಲು ಗಳಿಸಿ ಸಂಭ್ರಮಿಸಿದ ಕೌರು ಮಿಮೊಟ –ಎಎಫ್‌ಪಿ ಚಿತ್ರ
ಗೋಲು ಗಳಿಸಿ ಸಂಭ್ರಮಿಸಿದ ಕೌರು ಮಿಮೊಟ –ಎಎಫ್‌ಪಿ ಚಿತ್ರ   

ಸಿಡ್ನಿ: ಬದಲಿ ಆಟಗಾರ ಕೌರು ಮಿಮೊಟ ಗಳಿಸಿದ ಎರಡು ಗೋಲುಗಳಿಂದ ಜಪಾನ್ ತಂಡ ಆಸ್ಟ್ರೇಲಿಯಾವನ್ನು 2–0ಯಿಂದ ಮಣಿಸಿತು. ಈ ಮೂಲಕ ವಿಶ್ವಕಪ್ ಫುಟ್‌ಬಾಲ್ ಟೂರ್ನಿಯ ಮುಖ್ಯ ಸುತ್ತು ಪ್ರವೇಶಿಸಿತು. ಇದು, ಸೌದಿ ಅರೆಬಿಯಾದ ಹಾದಿಯನ್ನೂ ಸುಗಮಗೊಳಿಸಿತು.

ಪಂದ್ಯವು ಡ್ರಾದತ್ತ ಸಾಗಿತ್ತು. ಆದರೆ 89ನೇ ನಿಮಿಷದಲ್ಲಿ ಮಿಂಚಿನ ವೇಗದಲ್ಲಿ ಗೋಲು ಗಳಿಸಿ ಜಪಾನ್‌ಗೆ ಮುನ್ನಡೆ ಗಳಿಸಿಕೊಟ್ಟರು. ಇಂಜುರಿ ಅವಧಿಯಲ್ಲಿ ಅವರಿಂದ ಮತ್ತೊಂದು ಗೋಲು ಮೂಡಿಬಂತು.

ಈ ಜಯದೊಂದಿಗೆ ತಂಡ ಏಷ್ಯಾದ ಅರ್ಹತಾ ಹಂತದ ‘ಬಿ’ ಗುಂಪಿನಲ್ಲಿ 21 ಪಾಯಿಂಟ್ ಕಲೆ ಹಾಕಿತು. ಸೌದಿ ಅರೆಬಿಯಾ ಬಳಿ19 ಪಾಯಿಂಟ್‌ಗಳಿವೆ. ಜಪಾನ್ ಆರನೇ ಬಾರಿ ಮುಖ್ಯ ಸುತ್ತು ತಲುಪಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.