ADVERTISEMENT

ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿ: ಡ್ರಾ ಪಂದ್ಯದಲ್ಲಿ ಕೇರಳ ಬ್ಲಾಸ್ಟರ್ಸ್

​ಪ್ರಜಾವಾಣಿ ವಾರ್ತೆ
Published 28 ಡಿಸೆಂಬರ್ 2019, 20:00 IST
Last Updated 28 ಡಿಸೆಂಬರ್ 2019, 20:00 IST

ಕೊಚ್ಚಿ: ಕೇರಳ ಬ್ಲಾಸ್ಟರ್ಸ್‌ ‌ಮತ್ತು ನಾರ್ತ್‌ ಈಸ್ಟ್‌ ಯುನೈಟೆಡ್‌ ನಡುವಣ ಐಎಸ್‌ಎಲ್‌ ಫುಟ್‌ಬಾಲ್‌ ಟೂರ್ನಿಯ ಲೀಗ್ ಪಂದ್ಯ ಶನಿವಾರ 1–1 ಗೋಲುಗಳಿಂದ ಡ್ರಾ ಆಯಿತು.

ಜವಾಹರಲಾಲ್‌ ನೆಹರೂ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಬಾರ್ತಲೋಮಿಯೊ ಒಗ್ಬೇಚೆ 43ನೇ ನಿಮಿಷ ಕೇರಳ ತಂಡದ ಪರ ಗೋಲು ಗಳಿಸಿದರು. ವಿರಾಮದ ನಂತರ ಐದನೇ ನಿಮಿಷ ಅಸಮೋವಾ ಗ್ಯಾನ್‌ ಅವರು ನಾರ್ತ್‌ ಈಸ್ಟ್‌ ಯುನೈಟೆಡ್‌ ಸ್ಕೋರ್‌ ಸಮ ಮಾಡಿಕೊಳ್ಳಲು ನೆರವಾದರು.

ಎರಡೂ ತಂಡಗಳಿಗೆ ಇದು ಐದನೇ ಡ್ರಾ. ನಾರ್ತ್‌ ಈಸ್ಟ್‌ ತಂಡ (9 ಪಂದ್ಯಗಳಿಂದ 11 ಅಂಕ) ಏಳನೇ ಸ್ಥಾನದಲ್ಲಿದ್ದರೆ, ಕೇರಳ ತಂಡ (10 ಪಂದ್ಯಗಳಿಂದ 8) 9ನೇ ಸ್ಥಾನದಲ್ಲಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.