ADVERTISEMENT

ವದಂತಿಗಳಿಗೆ ತೆರೆ: ಮೆಸ್ಸಿ ಕಾರ್ಯಕ್ರಮಕ್ಕೆ ಆಗಮಿಸಿದ ಸುನಿಲ್‌ ಚೆಟ್ರಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 14 ಡಿಸೆಂಬರ್ 2025, 13:11 IST
Last Updated 14 ಡಿಸೆಂಬರ್ 2025, 13:11 IST
   

ಮುಂಬೈ: ಫುಟ್‌ಬಾಲ್‌ ತಾರೆ ಲಿಯೊನೆಲ್‌ ಮೆಸ್ಸಿ ಅವರ ಮುಂಬೈ ಕಾರ್ಯಕ್ರಮಕ್ಕೆ ಭಾರತದ ಫುಟ್‌ಬಾಲ್‌ ತಾರೆ ಸುನಿಲ್‌ ಚೆಟ್ರಿ ಆಗಮಿಸಿದ್ದಾರೆ.

ಮೆಸ್ಸಿ ಅವರು ‘GOAT Tour of India' ಪ್ರವಾಸದ ಭಾಗವಾಗಿ ಮೂರು ದಿನಗಳ ಕಾಲ ಭಾರತದಲ್ಲಿ ಇರಲಿದ್ದಾರೆ. ಮೊದಲ ದಿನ ಕೋಲ್ಕತ್ತ ಹಾಗೂ ಹೈದರಾಬಾದ್‌ಗೆ ಭೇಟಿ ನೀಡಿದ್ದರು. ಭಾನುವಾರ (ಡಿ.14) ಮುಂಬೈಗೆ ಆಗಮಿಸಿದ್ದಾರೆ.

ವಾಂಖೆಡೆ ಮೈದಾನದಲ್ಲಿ ನಡೆದ ಪ್ರದರ್ಶನ ಪಂದ್ಯದಲ್ಲಿ ಮಿತ್ರಾ ಸ್ಟಾರ್‌ ತಂಡದ ಪರ ಆಟವಾಡಿರುವ ಸುನಿಲ್‌ ಚೆಟ್ರಿ , ಗೋಲು ಗಳಿಸುವ ಮೂಲಕ ಗಮನ ಸೆಳೆದಿದ್ದಾರೆ.

ADVERTISEMENT

ಪಂದ್ಯಕ್ಕೂ ಮುನ್ನ ಮೆಸ್ಸಿ ಜೊತೆ ಮೈದಾನದಲ್ಲಿ ಮಾತುಕತೆಯನ್ನು ಕೂಡ ನಡೆಸಿದ್ದಾರೆ.

ಭಾರತದ ಫುಟ್‌ಬಾಲ್‌ ವಲಯದಲ್ಲಿ ಜನಪ್ರಿಯರಾಗಿರುವ ಸುನಿಲ್‌ ಚೆಟ್ರಿ ಅವರು ಮೆಸ್ಸಿ ಕಾರ್ಯಕ್ರಮಕ್ಕೆ ಬಂದಿರುವುದಕ್ಕೆ ನೆಟ್ಟಿಗರು ಸಾಮಾಜಿಕ ಜಾಲತಾಣದಲ್ಲಿ ಸಂತಸ ವ್ಯಕ್ತಪಡಿಸುತ್ತಿದ್ದಾರೆ.

ಲಿಯೊನೆಲ್‌ ಮೆಸ್ಸಿ ಅವರನ್ನು ಭೇಟಿಯಾಗಲು ಸುನಿಲ್‌ ಚೆಟ್ರಿ ನಿರಾಕರಿಸಿದ್ದಾರೆ ಎನ್ನುವ ವಂದತಿಗಳು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.