ADVERTISEMENT

ಫುಟ್‌ಬಾಲ್‌: ಪೋಸ್ಟಲ್‌ಗೆ ಜಯ

​ಪ್ರಜಾವಾಣಿ ವಾರ್ತೆ
Published 2 ಅಕ್ಟೋಬರ್ 2018, 17:43 IST
Last Updated 2 ಅಕ್ಟೋಬರ್ 2018, 17:43 IST

ಬೆಂಗಳೂರು: ಆ್ಯಂಡ್ರ್ಯೂ ಗಳಿಸಿದ ಏಕೈಕ ಗೋಲಿನ ನೆರವಿನಿಂದ ಪೋಸ್ಟಲ್‌ ಎಫ್‌ಸಿ ತಂಡ ಬಿಡಿಎಫ್‌ಎ ಆಶ್ರಯದಲ್ಲಿ ಪ್ರಸನ್ನಕುಮಾರ್‌ ಸ್ಮಾರಕ ಶೀಲ್ಡ್‌ಗಾಗಿ ನಡೆಯುತ್ತಿರುವ ‘ಎಚ್‌’ ಗುಂಪಿನ ಪಂದ್ಯದಲ್ಲಿ ಗೆದ್ದಿದೆ.

ಮಂಗಳವಾರ ನಡೆದ ಹಣಾಹಣಿಯಲ್ಲಿ ಪೋಸ್ಟಲ್‌ 1–0 ಗೋಲಿನಿಂದ ಇನ್‌ಕಮ್‌ ಟ್ಯಾಕ್ಸ್‌ ಎಫ್‌ಸಿ ತಂಡವನ್ನು ಮಣಿಸಿತು. ಆ್ಯಂಡ್ರ್ಯೂ 40+2ನೇ ನಿಮಿಷದಲ್ಲಿ ಗೋಲು ಬಾರಿಸಿದರು.

ಸಿ.‍ಪುಟ್ಟಯ್ಯ ಸ್ಮಾರಕ ಕಪ್‌ಗಾಗಿ ನಡೆಯುತ್ತಿರುವ ಸೂಪರ್‌ ಡಿವಿಷನ್‌ ಲೀಗ್‌ನ ಬೆಂಗಳೂರು ಡ್ರೀಮ್‌ ಯುನೈಟೆಡ್‌ ಮತ್ತು ಓಜೋನ್‌ ಎಫ್‌ಸಿ ಬೆಂಗಳೂರು ನಡುವಣ ಪಂದ್ಯ ಗೋಲು ರಹಿತ ಡ್ರಾ ಆಯಿತು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.