ADVERTISEMENT

ಕೋವಿಡ್‌ ಸಂತ್ರಸ್ತರಿಗೆ ಮರಡೋನಾ ನೆರವು

ಏಜೆನ್ಸೀಸ್
Published 9 ಮೇ 2020, 16:16 IST
Last Updated 9 ಮೇ 2020, 16:16 IST
   

ಬ್ಯೂನಸ್‌ ಐರಿಸ್‌: ಕೋವಿಡ್‌–19 ಪಿಡುಗಿನ ವಿರುದ್ಧದ ಹೋರಾಟಕ್ಕೆ ಹಿರಿಯ ಫುಟ್‌ಬಾಲ್‌ ಆಟಗಾರ ಡಿಗೊ ಮರಡೋನಾ ಕೈ ಜೋಡಿಸಿದ್ದಾರೆ. ತಮ್ಮ ಹಸ್ತಾಕ್ಷರ ಇರುವ, ರಾಷ್ಟ್ರೀಯ ತಂಡ ಅರ್ಜೆಂಟೀನಾ ಪರ ಧರಿಸಿದ್ದ ಜೆರ್ಸಿಯನ್ನು ಮಾರಾಟ ಮಾಡುವ ಮೂಲಕ ಸಂತ್ರಸ್ತರಿಗೆ ನೆರವು ನೀಡಿದ್ದಾರೆ.

1986ರಲ್ಲಿ ಅರ್ಜೆಂಟೀನಾ ವಿಶ್ವಕಪ್‌ ಗೆದ್ದಾಗ ಧರಿಸಿದ್ದ ಮಾದರಿಯ ಜೆರ್ಸಿಯನ್ನು ಅವರು ಮಾರಾಟ ಮಾಡಿದ್ದಾರೆ.

ಮೊದಲಿಗೆ ಜೆರ್ಸಿಯನ್ನು ಹರಾಜಿಗೆ ಇಡಲಾಗಿತ್ತು. ಆದರೆ ಕೆಲವರು ತಾವೇ ಮುಂದಾಗಿ ದೇಣಿಗೆ ನೀಡಿದರು. ಹೀಗಾಗಿ ಜೆರ್ಸಿಯನ್ನು ಅವರಿಗೇ ನೀಡಲಾಯಿತು. ಬಂದ ಹಣದಿಂದ ನೈರ್ಮಲ್ಯ ಉತ್ಪನ್ನಗಳು, ಮುಖಗವಸು ಹಾಗೂ ಅಂದಾಜು 100 ಕೆಜಿ ಆಹಾರ ವಸ್ತುಗಳನ್ನು ಖರೀದಿಸಿ ಬ್ಯೂನಸ್‌ ಐರಿಸ್‌ನ‌ ಹಿಂದುಳಿದ ಪ್ರದೇಶಗಳ ಜನರಿಗೆ ವಿತರಿಸಲಾಯಿತು.

ADVERTISEMENT

ಅರ್ಜೆಂಟೀನಾವನ್ನುಕೊರೊನಾ ಜೊತೆಗೆ ಆರ್ಥಿಕ ಬಿಕ್ಕಟ್ಟೂ ಕಾಡುತ್ತಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.