ADVERTISEMENT

ಆಸ್ಪತ್ರೆಯಿಂದ ಮನೆಗೆ ಮರಳಿದ ಮರಡೋನಾ

ಏಜೆನ್ಸೀಸ್
Published 12 ನವೆಂಬರ್ 2020, 16:42 IST
Last Updated 12 ನವೆಂಬರ್ 2020, 16:42 IST
ಗುರುವಾರ  ಆಸ್ಪತ್ರೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಡೀಗೊ ಮರಡೋನಾ ಅವರು ತಮ್ಮ ಆಪ್ತ ವೈದ್ಯ ಲಿಯೊಪೋಲ್ಡ್‌ ಲೂಕ್ ಅವರೊಂದಿಗೆ  –ಎಎಫ್‌ಪಿ ಚಿತ್ರ
ಗುರುವಾರ  ಆಸ್ಪತ್ರೆಯಿಂದ ಮನೆಗೆ ತೆರಳುವ ಸಂದರ್ಭದಲ್ಲಿ ಡೀಗೊ ಮರಡೋನಾ ಅವರು ತಮ್ಮ ಆಪ್ತ ವೈದ್ಯ ಲಿಯೊಪೋಲ್ಡ್‌ ಲೂಕ್ ಅವರೊಂದಿಗೆ  –ಎಎಫ್‌ಪಿ ಚಿತ್ರ   

ಬ್ಯೂನಸ್ ಐರಿಸ್:ಮಿದುಳಿನ ಶಸ್ತ್ರಚಿಕಿತ್ಸೆಗೊಳಗಾಗಿದ್ದ ಫುಟ್‌ಬಾಲ್ ದಂತಕತೆ ಡೀಗೊ ಮರಡೋನಾ ಗುರುವಾರ ಆಸ್ಪತ್ರೆಯಿಂದ ಮನೆಗೆ ಮರಳಿದ್ದಾರೆ.ಎಂಟು ದಿನಗಳ ಹಿಂದೆ ಅವರು ಇಲ್ಲಿಯ ಆಸ್ಪತ್ರೆಗೆ ದಾಖಲಾಗಿದ್ದರು. ಅವರಿಗೆ ಶಸ್ತ್ರಚಿಕಿತ್ಸೆ ನಡೆಸಲಾಗಿತ್ತು.

ಅವರ ಆರೋಗ್ಯ ಸ್ಥಿರವಾಗಿದ್ದು, ಮನೆಗೆ ಹೋಗಲು ಇಚ್ಛಿಸಿದ್ದರು. ಆದ್ದರಿಂದ ಅವರಿಗೆ ಅನುಮತಿ ನೀಡಲಾಗಿದೆ ಎಂದು ಒಲಿವೊಸ್ ಆಸ್ಪತ್ರೆಯ ವೈದ್ಯ ಲಿಯೊಪೊಲ್ಡೊ ಲೂಕ್ ಸ್ಥಳೀಯ ಟಿ.ವಿ. ವಾಹಿನಿಯೊಂದಕ್ಕೆ ಹೇಳಿಕೆ ನೀಡಿದ್ದಾರೆ. ಮರಡೋನಾ ಅವರು ಅಂಬುಲೆನ್ಸ್‌ನಲ್ಲಿ ಮನೆಗೆ ತೆರಳುವ ದೃಶ್ಯ ತುಣುಕನ್ನು ಟಿ.ವಿ.ಯಲ್ಲಿ ತೋರಿಸಲಾಗಿದೆ.

’ಅವರು ತಮ್ಮ ಕುಟುಂಬದ ಸದಸ್ಯರೊಂದಿಗೆ ಇರಲು ಇಚ್ಛಿಸಿದ್ದರು. ಸದ್ಯದ ಪರಿಸ್ಥಿತಿಯಲ್ಲಿ ಇದು ಅವರಿಗೆ ಅಗತ್ಯವೂ ಹೌದು. ಆಸ್ಪತ್ರೆಯಲ್ಲಿ ಅವರನ್ನು ಸದಾ ಕಾಲ ಆರೋಗ್ಯ ಸಿಬ್ಬಂದಿ ಮತ್ತು ವೈದ್ಯರು ಸುತ್ತುವರಿದಿರುತ್ತಿದ್ದರು. ಆದರೆ ಮೆನಯಲ್ಲಿಯೂ ಅವರಿಗೆ ಎಲ್ಲ ರೀತಿಯ ಆರೋಗ್ಯ ಸೌಕರ್ಯಗಳನ್ನು ಒದಗಿಸಲಾಗಿದೆ‘ ಎಂದು ವೈದ್ಯರು ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.