ADVERTISEMENT

ಕೋವಿಡ್‌ –19 ಪರೀಕ್ಷೆಗೆ ಹಾಜರಾಗದ ಮೆಸ್ಸಿ: ಕ್ಲಬ್ ತೊರೆಯುವ ವದಂತಿ

ಏಜೆನ್ಸೀಸ್
Published 30 ಆಗಸ್ಟ್ 2020, 11:56 IST
Last Updated 30 ಆಗಸ್ಟ್ 2020, 11:56 IST
ಲಯೊನೆಲ್‌ ಮೆಸ್ಸಿ–ರಾಯಿಟರ್ಸ್ ಚಿತ್ರ
ಲಯೊನೆಲ್‌ ಮೆಸ್ಸಿ–ರಾಯಿಟರ್ಸ್ ಚಿತ್ರ   

ಮ್ಯಾಡ್ರಿಡ್‌ : ಬಾರ್ಸಿಲೋನಾ ಫುಟ್‌ಬಾಲ್ ತಂಡದ ಆಟಗಾರರಿಗೆ ಅಗತ್ಯವಾಗಿದ್ದ ಕಡ್ಡಾಯ ಕೋವಿಡ್‌–19 ಪರೀಕ್ಷೆಗೆ ಲಯೊನೆಲ್‌ ಮೆಸ್ಸಿ ಭಾನುವಾರ ಗೈರುಹಾಜರಾಗಿದ್ದಾರೆ. ಇದರಿಂದ, ಅವರು ಕ್ಲಬ್ ತೊರೆಯುತ್ತಾರೆ ಎಂಬ ವದಂತಿಗೆ ಮತ್ತೊಂದು ಸಂಕೇತ ದೊರೆತಂತಾಗಿದೆ.

‘ಕ್ಲಬ್‌ನ ತರಬೇತಿ ಕೇಂದ್ರದಲ್ಲಿ ಕೋವಿಡ್‌ ಪರೀಕ್ಷೆಗೆ ಎಲ್ಲರೂ ಒಳಗಾಗಿದ್ದು, ಮೆಸ್ಸಿ ಮಾತ್ರ ಹಾಜರಾಗಿಲ್ಲ‘ ಎಂದು ಬಾರ್ಸಿಲೋನಾ ಕ್ಲಬ್‌ ಹೇಳಿದೆ. ತಂಡವು ಮುಂಬರುವ ಋತುವಿನ ಟೂರ್ನಿಗಳನ್ನು ಕಣಕ್ಕಿಳಿಯಲು ಸೋಮವಾರದಿಂದ ತರಬೇತಿ ನಡೆಸಲಿದೆ.

ಮೆಸ್ಸಿ ಅವರು ಹೋದ ವಾರ ಕ್ಲಬ್‌ ತೊರೆಯುವ ಒಲವು ವ್ಯಕ್ತಪಡಿಸಿದ್ದರು. ಆದರೆ ಬಾರ್ಸಿಲೋನಾ, ‌2021ರಜೂನ್‌ವರೆಗೆ ಇರುವ ಒಪ್ಪಂದದವರೆಗೆ ಅವರು ಆಡಬೇಕೆಂದು ಬಯಸಿತ್ತು.

ADVERTISEMENT

ಕ್ಲಬ್‌ ತೊರೆಯುವ ನಿರ್ಧಾರವನ್ನುಮಂಗಳವಾರ ಬ್ಯೂರೊಫ್ಯಾಕ್ಸ್ (ಟೆಲಿಗ್ರಾಂ ರೀತಿಯ ಆ್ಯಪ್‌) ಮೂಲಕ ಮೆಸ್ಸಿ ರವಾನಿಸಿದ್ದರು.

ಒಪ್ಪಂದದ ಕೊನೆಯಲ್ಲಿ ಬೇರೆ ತಂಡ ಸೇರಲು ತನಗೆ ಮುಕ್ತ ಅವಕಾಶ ನೀಡಬೇಕೆಂಬ ಶರತ್ತು ಮಾಡಿಕೊಂಡಿದ್ದನ್ನು ಅವರು ನೆನಪಿಸಿದ್ದರು. ಆದರೆ ಈ ಶರತ್ತಿನ ಅವಧಿ ಈಗಾಗಲೇ ಕೊನೆಗೊಂಡಿದೆ ಎಂದು ಕ್ಲಬ್‌ ಹೇಳಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.