ADVERTISEMENT

ಏಳು ತಿಂಗಳ ಬಳಿಕ ಮೋಹನ್‌ ಬಾಗನ್‌ಗೆ ಐ–ಲೀಗ್‌ ಟ್ರೋಫಿ ಪ್ರದಾನ

ಪಿಟಿಐ
Published 18 ಅಕ್ಟೋಬರ್ 2020, 13:23 IST
Last Updated 18 ಅಕ್ಟೋಬರ್ 2020, 13:23 IST
ರಿಯಲ್‌ ಕಾಶ್ಮೀರ ಎಫ್‌ಸಿ (ಹಳದಿ ಜೆರ್ಸಿ) ಹಾಗೂ ಮೋಹನ್‌ ಬಾಗನ್‌ ತಂಡಗಳ ನಡುವಿನ ಐ–ಲೀಗ್‌ ಪಂದ್ಯ– ಪಿಟಿಐ ಚಿತ್ರ
ರಿಯಲ್‌ ಕಾಶ್ಮೀರ ಎಫ್‌ಸಿ (ಹಳದಿ ಜೆರ್ಸಿ) ಹಾಗೂ ಮೋಹನ್‌ ಬಾಗನ್‌ ತಂಡಗಳ ನಡುವಿನ ಐ–ಲೀಗ್‌ ಪಂದ್ಯ– ಪಿಟಿಐ ಚಿತ್ರ   

ಕೋಲ್ಕತ್ತ : ಐ–ಲೀಗ್‌ ಫುಟ್‌ಬಾಲ್‌ ಟೂರ್ನಿಯಲ್ಲಿ ಚಾಂಪಿಯನ್‌ ಪಟ್ಟ ಧರಿಸಿದ ಏಳು ತಿಂಗಳುಗಳ ಬಳಿಕ ಮೋಹನ್‌ ಬಾಗನ್‌ ತಂಡಕ್ಕೆ ಭಾನುವಾರ ಟ್ರೋಫಿ ಪ್ರದಾನ ಮಾಡಲಾಯಿತು.

ಮಾರ್ಚ್‌ 10ರಂದು ಮಾಜಿ ಚಾಂಪಿಯನ್‌ ಐಜ್ವಾಲ್‌ ಎಫ್‌ಸಿ ತಂಡವನ್ನು 1–0ಯಿಂದ ಮಣಿಸಿದ್ದ ಬಾಗನ್‌ ತಂಡ ಟೂರ್ನಿಯಲ್ಲಿ ನಾಲ್ಕು ಸುತ್ತುಗಳು ಬಾಕಿ ಇರುವಂತೆಯೇ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿತ್ತು. ಆದರೆ ಕೋವಿಡ್‌–19 ಹಾವಳಿಯ ಹಿನ್ನೆಲೆಯಲ್ಲಿ ಸಂಭ್ರಮಾಚರಣೆಗೆ ಹಾಗೂ ಟ್ರೋಫಿ ಸ್ವೀಕರಿಸಲು ಕಾಯಬೇಕಾಗಿತ್ತು.

ಐ-ಲೀಗ್ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಸುನಂದೊ ಧಾರ್ ಅವರು ಕ್ಲಬ್ ಅಧ್ಯಕ್ಷ ಸ್ವಪನ್ ಸಾಧನ್ ಬೋಸ್ ಮತ್ತು ಪಶ್ಚಿಮ ಬಂಗಾಳದ ಕ್ರೀಡಾ ಸಚಿವ ಅರೂಪ್ ಬಿಸ್ವಾಸ್ ಅವರ ಸಮ್ಮುಖದಲ್ಲಿ ಟ್ರೋಫಿಯನ್ನು ಕೆಲವು ಆಟಗಾರರು ಮತ್ತು ಅಧಿಕಾರಿಗಳಿಗೆ ಹಸ್ತಾಂತರಿಸಲಾಯಿತು.

ADVERTISEMENT

ಕೋವಿಡ್‌ ತಡೆ ನಿಯಮಗಳ ಉಲ್ಲಂಘನೆ: ಟ್ರೋಫಿಯನ್ನು ಸ್ವೀಕರಿಸಿದ ಬಳಿಕ ಕೋಲ್ಕತ್ತದ ಬೀದಿಗಳಲ್ಲಿ ವಿಜಯೋತ್ಸವದ ಮೆರವಣಿಗೆ ನಡೆಸಲಾಯಿತು. ಈ ವೇಳೆ ಕ್ಲಬ್‌ನ ಸಾವಿರಾರು ಅಭಿಮಾನಿಗಳು ಮುಖಗವಸು ಧರಿಸದೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.