ADVERTISEMENT

ಮೂಸಾ ಕಾಲ್ಚಳಕಕ್ಕೆ ಮಣಿದ ಐಸ್‌ಲ್ಯಾಂಡ್‌

ರಾಯಿಟರ್ಸ್
Published 22 ಜೂನ್ 2018, 18:30 IST
Last Updated 22 ಜೂನ್ 2018, 18:30 IST
ಐಸ್‌ಲ್ಯಾಂಡ್ ಎದುರು ಶುಕ್ರವಾರ ನಡೆದ ಪಂದ್ಯದಲ್ಲಿ ಗೋಲು ಗಳಿಸಿದ ನೈಜೀರಿಯಾದ ಅಹಮ್ಮದ್‌ ಮೂಸಾ (ಬಲ) ಅವರು ಒಹೆನಾಕೊ ಎಟೆಬೊ (ಮಧ್ಯ) ಅವರೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ
ಐಸ್‌ಲ್ಯಾಂಡ್ ಎದುರು ಶುಕ್ರವಾರ ನಡೆದ ಪಂದ್ಯದಲ್ಲಿ ಗೋಲು ಗಳಿಸಿದ ನೈಜೀರಿಯಾದ ಅಹಮ್ಮದ್‌ ಮೂಸಾ (ಬಲ) ಅವರು ಒಹೆನಾಕೊ ಎಟೆಬೊ (ಮಧ್ಯ) ಅವರೊಂದಿಗೆ ಸಂಭ್ರಮಿಸಿದರು –ಎಎಫ್‌ಪಿ ಚಿತ್ರ   

ವೊಲ್ಗೊಗ್ರಾಂಡ್‌: ಅಹಮ್ಮದ್ ಮೂಸಾ ಅವರ ಕಾಲ್ಚಳಕಕ್ಕೆ ಬೆರಗಾದ ಐಸ್‌ಲ್ಯಾಂಡ್‌ ತಂಡ ವಿಶ್ವಕಪ್‌ನ ಶುಕ್ರವಾರದ ಪಂದ್ಯದಲ್ಲಿ ನೈಜೀರಿಯಾಗೆ ಮಣಿಯಿತು.

ಮೊದಲಾರ್ಧದಲ್ಲಿ ಉಭಯ ತಂಡಗಳಿಗೂ ಗೋಲು ಗಳಿಸಲು ಆಗಲಿಲ್ಲ. ಆದರೆ 49 ಮತ್ತು 75ನೇ ನಿಮಿಷದಲ್ಲಿ ಗೋಲು ಗಳಿಸಿದ ಮೂಸಾ ನೈಜೀರಿಯಾವನ್ನು ಗೆಲುವಿನ ದಡ ಸೇರಿಸಿದರು.

ಮೊದಲಾರ್ಧದಲ್ಲಿ ಸಮಬಲದ ಹೋರಾಟ ನಡೆಸಿದ ಐಸ್‌ಲ್ಯಾಂಡ್‌ದ್ವಿತೀಯಾರ್ಧದಲ್ಲಿ ಕಳೆಗುಂದಿತು. ಇದರ ಲಾಭ ಪಡೆದುಕೊಂಡ ನೈಜೀರಿಯಾ ಚೆಂಡಿನ ಮೇಲೆ ಆಧಿಪತ್ಯ ಸ್ಥಾಪಿಸಿತು. ಮೊದಲಾರ್ಧದಲ್ಲಿ ಅವಕಾಶಗಳನ್ನು ಸೃಷ್ಟಿಸಿಕೊಳ್ಳಲು ಪರದಾಡಿದ ನೈಜೀರಿಯಾ ದ್ವಿತೀಯಾರ್ಧದಲ್ಲಿ ರಣತಂತ್ರವನ್ನು ಬದಲಿಸಿತು. ಇದು ಯಶಸ್ಸು ಕಂಡಿತು.

ADVERTISEMENT

ಶುಕ್ರವಾರದ ಜಯದೊಂದಿಗೆ ಮೂರು ಪಾಯಿಂಟ್‌ಗಳೊಂದಿಗೆ ನೈಜೀರಿಯಾ ‘ಡಿ’ ಗುಂಪಿನ ಪಾಯಿಂಟ್ ಪಟ್ಟಿಯಲ್ಲಿ ಎರಡನೇ ಸ್ಥಾನಕ್ಕೇರಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.