ADVERTISEMENT

ಫುಟ್‌ಬಾಲ್ ದಿಗ್ಗಜ ಪೆಲೆ ಆರೋಗ್ಯದಲ್ಲಿ ಕಾಣದ ಚೇತರಿಕೆ

ಏಜೆನ್ಸೀಸ್
Published 29 ಡಿಸೆಂಬರ್ 2022, 12:37 IST
Last Updated 29 ಡಿಸೆಂಬರ್ 2022, 12:37 IST
ಪೆಲೆ
ಪೆಲೆ    

ಸಾವೊ ಪೌಲೊ: ಫುಟ್‌ಬಾಲ್ ಕ್ರೀಡೆಯ ದಿಗ್ಗಜ ಪೆಲೆ ಅವರ ಆಸ್ಪತ್ರೆವಾಸ ಒಂದು ತಿಂಗಳು ಪೂರೈಸಿದೆ. ಅವರ ಆರೋಗ್ಯದಲ್ಲಿ ಯಾವುದೇ ಚೇತರಿಕೆ ಕಂಡುಬಂದಿಲ್ಲ.

ನವೆಂಬರ್‌ 29 ರಂದು ಪೆಲೆ ಇಲ್ಲಿನ ಅಲ್ಬರ್ಟ್‌ ಐನ್‌ಸ್ಟೈನ್ ಆಸ್ಪತ್ರೆಗೆ ದಾಖಲಾಗಿದ್ದರು. ಅವರ ಕರುಳಿನ ಕ್ಯಾನ್ಸರ್‌ ಉಲ್ಬಣಿಸಿದ್ದು ಮೂತ್ರಪಿಂಡ ಮತ್ತು ಹೃದಯಕ್ಕೆ ಸೋಂಕು ವ್ಯಾಪಿಸಿದೆ ಎಂದು ಈಚೆಗೆ ಆಸ್ಪತ್ರೆಯ ಮೂಲಗಳು ತಿಳಿಸಿದ್ದವು.

‘ಈ ಕ್ಷಣದಲ್ಲಿ ಅನುಭವಿಸುತ್ತಿರುವ ವೇದನೆಯನ್ನು ವಿವರಿಸುವುದು ಕಷ್ಟ. ಕೆಲವೊಮ್ಮೆ ಬಹಳಷ್ಟು ದುಃಖ ಮತ್ತು ಹತಾಶೆ ಉಂಟಾಗುತ್ತದೆ’ ಎಂದು ಪೆಲೆ ಅವರ ಮಗಳು ಕೆಲಿ ನಸಿಮೆಂಟೊ ಇನ್ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

ADVERTISEMENT

ಪೆಲೆ ಅವರ ಕುಟುಂಬದ ಸದಸ್ಯರು ಭಾನುವಾರ ಆಸ್ಪತ್ರೆಯಲ್ಲಿಯೇ ಕ್ರಿಸ್‌ಮಸ್ ಆಚರಿಸಿದ್ದರು. ಅವರ ಆರೋಗ್ಯಸ್ಥಿತಿಯ ಬಗ್ಗೆ ಆಸ್ಪತ್ರೆಯು ಕಳೆದ ಒಂದು ವಾರದಲ್ಲಿ ಯಾವುದೇ ಮಾಹಿತಿ ನೀಡಿಲ್ಲ.

ಶನಿವಾರ ಆಸ್ಪತ್ರೆಗೆ ಭೇಟಿ ನೀಡಿದ್ದ ಪೆಲೆ ಅವರ ಪುತ್ರ ಯಡಿನೊ, ದಕ್ಷಿಣ ಬ್ರೆಜಿಲ್‌ನಲ್ಲಿ ತಾವು ವಾಸವಿರುವ ನಗರಕ್ಕೆ ವಾಪಸಾಗಿದ್ದಾರೆ. ತಂದೆಯ ಆರೋಗ್ಯದ ಬಗ್ಗೆ ಅವರು ಮಾಧ್ಯಮದವರಿಗೆ ಯಾವುದೇ ಮಾಹಿತಿ ನೀಡಿಲ್ಲ.

‘ಪೆಲೆಗೆ ನೀಡುತ್ತಿರುವ ಕಿಮೊಥೆರಪಿ ಪರಿಣಾಮ ಬೀರುತ್ತಿಲ್ಲ. ಆದ್ದರಿಂದ ಅವರನ್ನು ಪ್ಯಾಲೆಟಿವ್‌ ಕೇರ್‌ ವಿಭಾಗದಲ್ಲಿ ದಾಖಲಿಸಲಾಗಿದೆ’ ಎಂದು ಪತ್ರಿಕೆಯೊಂದು ವರದಿ ಮಾಡಿತ್ತು. ಕುಟುಂಬದ ಸದಸ್ಯರು ಅಲ್ಲಗಳೆದಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.