ADVERTISEMENT

ಸೆಮಿಫೈನಲ್‌ಗೆ ಪಂಜಾಬ್‌ ಎಫ್‌ಸಿ

​ಪ್ರಜಾವಾಣಿ ವಾರ್ತೆ
Published 5 ನವೆಂಬರ್ 2025, 19:09 IST
Last Updated 5 ನವೆಂಬರ್ 2025, 19:09 IST
   

ಮಡಗಾಂವ್‌ (ಪಿಟಿಐ): ಒತ್ತಡದ ಪರಿಸ್ಥಿತಿಯನ್ನು ನಿಭಾಯಿಸಿದ ಪಂಜಾಬ್‌ ಎಫ್‌ಸಿ ತಂಡ ಪೆನಾಲ್ಟಿ ಶೂಟೌಟ್‌ನಲ್ಲಿ ಬೆಂಗಳೂರು ಎಫ್‌ಸಿ ತಂಡವನ್ನು 5–4 ಗೋಲುಗಳಿಂದ ಸೋಲಿಸಿತು. ಬುಧವಾರ ನಡೆದ ಸೂಪರ್‌ ಕಪ್‌ ‘ಸಿ’ ಗುಂಪಿನ ಈ ಕೊನೆಯ ಪಂದ್ಯ ‘ಗೆಲ್ಲುವ’ ಮೂಲಕ ಪಂಜಾಬ್ ಎಫ್‌ಸಿ ಸೆಮಿಫೈನಲ್‌ಗೆ ಸ್ಥಾನ ಕಾದಿರಿಸಿತು.

ನಿಯಮಿತ ಅವಧಿಯ ಆಟ ಗೋಲುರಹಿತವಾಗಿತ್ತು. ಗುಂಪಿನಲ್ಲಿ ಎರಡೂ ತಂಡಗಳು ತಲಾ ಏಳು ಪಾಯಿಂಟ್ಸ್‌ ಗಳಿಸಿದವು. ಇಬ್ಬರೂ ತಲಾ ಎರಡು ಗೆದ್ದು, ಒಂದು ಡ್ರಾ ಮಾಡಿಕೊಂಡಿದ್ದವು. ಗೋಲು ಸರಾಸರಿ ಸಹಿತ ಸಮಾನವಾಗಿತ್ತು. ಹೀಗಾಗಿ ಗುಂಪಿನ ವಿಜೇತರನ್ನು ಪೆನಾಲ್ಟಿ ಶೂಟೌಟ್‌ ಮೂಲಕ ನಿರ್ಧರಿಸಲಾಯಿತು.

ಬೆಂಗಳೂರು ಪರ ಸುರೇಶ್ ಸಿಂಗ್‌ ವಾಂಗ್ಜಮ್‌, ರಾಹುಲ್‌ ಭೆಕೆ, ಸುನಿಲ್ ಚೆಟ್ರಿ ಮತ್ತು ಬ್ರಿಯಾನ್‌ ಸ್ಯಾಂಚೆಝ್ ಚೆಂಡನ್ನು ಗುರಿಮುಟ್ಟಿಸಿದರು. ಆದರೆ ರಯಾನ್ ವಿಲಿಯಮ್ಸ್‌ ವಿಫಲರಾದರು. ಪಂಜಾಬ್‌ ತಂಡದ ಐದೂ ಮಂದಿ ಚೆಂಡನ್ನು ಗುರಿಮುಟ್ಟಿಸಿದರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.