ADVERTISEMENT

ರೊನಾಲ್ಡೊಗೆ ಗಾಯ

ರಾಯಿಟರ್ಸ್
Published 26 ಮಾರ್ಚ್ 2019, 16:35 IST
Last Updated 26 ಮಾರ್ಚ್ 2019, 16:35 IST
ಕ್ರಿಸ್ಟಿಯಾನೊ ರೊನಾಲ್ಡೊ
ಕ್ರಿಸ್ಟಿಯಾನೊ ರೊನಾಲ್ಡೊ   

ಲಿಬ್ಸನ್‌ : ಪೋರ್ಚುಗಲ್‌ ತಂಡದ ಕ್ರಿಸ್ಟಿಯಾನೊ ರೊನಾಲ್ಡೊ, ಸರ್ಬಿಯಾ ಎದುರಿನ ಯುರೋ ಕ‍‍ಪ್‌ ಅರ್ಹತಾ ‍ಪಂದ್ಯದ ವೇಳೆ ಗಾಯಗೊಂಡಿದ್ದಾರೆ.

ಸೋಮವಾರ ನಡೆದ ಈ ಹಣಾಹಣಿಯು 1–1 ಗೋಲುಗಳಿಂದ ಡ್ರಾ ಆಯಿತು.

‘ಆಟದಲ್ಲಿ ಇವೆಲ್ಲಾ ಸಾಮಾನ್ಯ. ಮಳೆಯಲ್ಲಿ ಅಡ್ಡಾಡಿದರೆ ಮೈ ಒದ್ದೆಯಾಗುವುದು ಸಹಜವಲ್ಲವೇ. ಹಾಗೇಯೆ ಇದು ಕೂಡಾ. ಇನ್ನು ಎರಡು ವಾರದೊಳಗೆ ಸಂಪೂರ್ಣವಾಗಿ ಗುಣಮುಖನಾಗಿ ಅಂಗಳಕ್ಕಿಳಿಯುತ್ತೇನೆ’ ಎಂದು ಕ್ರಿಸ್ಟಿಯಾನೊ ತಿಳಿಸಿದ್ದಾರೆ.

ADVERTISEMENT

ಈ ಪಂದ್ಯದಲ್ಲಿ ಪೋರ್ಚುಗಲ್‌ ಪರ ಡೆನಿಲೊ ಪೆರೇರಾ 42ನೇ ನಿಮಿಷದಲ್ಲಿ ಗೋಲು ಹೊಡೆದರು. ಸರ್ಬಿಯಾದ ದುಸಾನ್‌ ತಾದಿಚ್‌ ಏಳನೇ ನಿಮಿಷದಲ್ಲಿ ಸಿಕ್ಕ ಪೆನಾಲ್ಟಿ ಅವಕಾಶವನ್ನು ಗೋಲಾಗಿ ಪರಿವರ್ತಿಸಿ ತಂಡಕ್ಕೆ ಮುನ್ನಡೆ ತಂದುಕೊಟ್ಟಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.