ADVERTISEMENT

ಯುಇಎಫ್‌ಎ ಚಾಂಪಿಯನ್ಸ್ ಲೀಗ್ ಫುಟ್‌ಬಾಲ್‌: ಲಿವರ್‌ಪೂಲ್‌ಗೆ ಸಲಾ ಮೇಲೆ ನಿರೀಕ್ಷೆ

ಸೆಮಿಯಲ್ಲಿ ವಿಲ್ಲಾರಿಯಲ್ ಎದುರಾಳಿ

​ಪ್ರಜಾವಾಣಿ ವಾರ್ತೆ
Published 26 ಏಪ್ರಿಲ್ 2022, 12:19 IST
Last Updated 26 ಏಪ್ರಿಲ್ 2022, 12:19 IST
ಮೊಹಮ್ಮದ್ ಸಲಾ– ಎಎಫ್‌ಪಿ ಚಿತ್ರ
ಮೊಹಮ್ಮದ್ ಸಲಾ– ಎಎಫ್‌ಪಿ ಚಿತ್ರ   

ಬೆಂಗಳೂರು: ಮಿಡ್‌ಫೀಲ್ಡರ್‌ಮೊಹಮ್ಮದ್‌ ಸಲಾ ಮೇಲೆ ಲಿವರ್‌ಪೂಲ್ ಎಫ್‌ಸಿ ಹೆಚ್ಚು ನಿರೀಕ್ಷೆ ಇಟ್ಟುಕೊಂಡಿದ್ದು, ವಿಲ್ಲಾರಿಯಲ್ ಎದುರಿನ ಪಂದ್ಯದಲ್ಲಿ ಅವರು ಮಿಂಚುವ ಸಾಧ್ಯತೆಯಿದೆ ಎಂದು ಇಂಗ್ಲೆಂಡ್‌ ತಂಡದ ಮಾಜಿ ಆಟಗಾರ ಡೇವಿಡ್ ಜೇಮ್ಸ್ ಹೇಳಿದ್ದಾರೆ.

ಸೋನಿ ಸ್ಪೋರ್ಟ್ಸ್ ನೆಟ್‌ವರ್ಕ್ ಮಂಗಳವಾರ ವರ್ಚುವಲ್ ಆಗಿ ಆಯೋಜಿಸಿದ್ದ ಮಾಧ್ಯಮ ಸಂವಾದದಲ್ಲಿ ಅವರು ಮಾತನಾಡಿದರು.

ಲಿವರ್‌ಪೂಲ್ ತಂಡವು ಯುಇಎಫ್ಎ ಚಾಂಪಿಯನ್ಸ್ ಲೀಗ್‌ನ ಸೆಮಿಫೈನಲ್‌ನ ಮೊದಲ ಲೆಗ್‌ನಲ್ಲಿ ವಿಲ್ಲಾರಿಯಲ್ ತಂಡವನ್ನು ಎದುರಿಸಲಿದೆ. ಲಿವರ್‌ಪೂಲ್‌ನ ಆ್ಯನ್‌ಫೀಲ್ಡ್ ಕ್ರೀಡಾಂಗಣದಲ್ಲಿ ಈ ಪಂದ್ಯ ನಿಗದಿಯಾಗಿದೆ.

ADVERTISEMENT

‘ಮೊಹಮ್ಮದ್‌ ಸಲಾ ಲಿವರ್‌ಪೂಲ್‌ನ ಆಸ್ತಿ. ಟೂರ್ನಿಯುದ್ದಕ್ಕೂ ಉತ್ತಮ ಸಾಮರ್ಥ್ಯ ತೋರುತ್ತ ಬಂದಿದ್ದಾರೆ. ಸಹಜವಾಗಿಯೇ ಅವರು ತಂಡವನ್ನು ಮುಂದಿನ ಹಂತಕ್ಕೆ ಕೊಂಡೊಯ್ಯುವ ಭರವಸೆ ಹೆಚ್ಚಿದೆ‘ ಎಂದು ಡೇವಿಡ್‌ ಹೇಳಿದರು.

ಗೋಲ್‌ಕೀಪರ್ ಆಗಿದ್ದ ಡೇವಿಡ್‌ ಲಿವರ್‌ಪೂಲ್ ಮತ್ತು ಮ್ಯಾಂಚೆಸ್ಟರ್‌ ಸಿಟಿ ಕ್ಲಬ್‌ಗಳ ಪರವೂ ಆಡಿದ್ದಾರೆ.

ಈಜಿಪ್ಟ್‌ ರಾಷ್ಟ್ರೀಯ ತಂಡವನ್ನು ಪ್ರತಿನಿಧಿಸುವ ಸಲಾ, 2021–22ರ ಋತುವಿನಲ್ಲಿ ಲಿವರ್‌ಪೂಲ್ ಪರ 31 ಪಂದ್ಯಗಳನ್ನು ಆಡಿದ್ದು 22 ಗೋಲುಗಳನ್ನು ಗಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.