ADVERTISEMENT

ಫುಟ್‌ಬಾಲ್‌: ಕೋಚ್ ಸ್ಟಿಮ್ಯಾಚ್‌ ಸೆಪ್ಟೆಂಬರ್‌ವರೆಗೆ ಮುಂದುವರಿಯುವ ಸಾಧ್ಯತೆ

ಪಿಟಿಐ
Published 25 ಮೇ 2021, 13:30 IST
Last Updated 25 ಮೇ 2021, 13:30 IST
ಇಗರ್ ಸ್ಟಿಮ್ಯಾಚ್‌– ಎಎಫ್‌ಪಿ ಚಿತ್ರ
ಇಗರ್ ಸ್ಟಿಮ್ಯಾಚ್‌– ಎಎಫ್‌ಪಿ ಚಿತ್ರ   

ನವದೆಹಲಿ: ರಾಷ್ಟ್ರೀಯ ತಂಡದ ಕೋಚ್ ಇಗರ್ ಸ್ಟಿಮ್ಯಾಚ್ ಅವರ ಒಪ್ಪಂದವನ್ನುಸೆಪ್ಟೆಂಬರ್‌ವರೆಗೆ ವಿಸ್ತರಿಸಲು ಅಖಿಲ ಭಾರತ ಫುಟ್‌ಬಾಲ್ ಫೆಡರೇಷನ್‌ನ (ಎಐಎಫ್‌ಎಫ್‌) ತಾಂತ್ರಿಕ ಸಮಿತಿಯು ಶಿಫಾರಸು ಮಾಡುವ ಸಾಧ್ಯತೆಯಿದೆ. ಸೆಪ್ಟೆಂಬರ್‌ನಲ್ಲಿ ಎಎಫ್‌ಸಿ2023ರ ಏಷ್ಯಾಕಪ್ ಟೂರ್ನಿಯ ಅರ್ಹತಾ ಪಂದ್ಯಗಳು ನಡೆಯಲಿವೆ.

2019ರ ಮೇನಲ್ಲಿ ಭಾರತ ತಂಡದ ಕೋಚ್ ಆಗಿಕ್ರೊವೇಷ್ಯಾದ ಸ್ಟಿಮ್ಯಾಚ್ ನೇಮಕಗೊಂಡಿದ್ದರು. ಅವರ ಎರಡು ವರ್ಷಗಳ ಒಪ್ಪಂದ ನವೀಕರಣಗೊಳ್ಳುವ ಹಂತದಲ್ಲಿದೆ. ಎಐಎಫ್‌ಎಫ್‌ನ ತಾಂತ್ರಿಕ ಸಮಿತಿ ಸಭೆಯು ಶುಕ್ರವಾರ ನಡೆಯಲಿದ್ದು, ಸ್ಟಿಮ್ಯಾಚ್ ಅವರ ಒಪ್ಪಂದ ಸೇರಿದಂತೆ ಹಲವು ವಿಷಯಗಳು ಚರ್ಚೆಗೆ ಬರಲಿವೆ.

ಸ್ಟಿಮ್ಯಾಚ್ ಮಾರ್ಗದರ್ಶನದಲ್ಲಿ ತಂಡವು 12 ಪಂದ್ಯಗಳಲ್ಲಿ ಕೇವಲ ಒಂದು ಪಂದ್ಯ ಗೆದ್ದಿದ್ದರೂ ಹಲವು ಭರವಸೆಯ ಯುವ ಪ್ರತಿಭೆಗಳಿಗೆ ಅವರು ಅವಕಾಶ ನೀಡಿದ್ದಾರೆ. ಅಲ್ಲದೆ ಆಟಗಾರರಿಗೆ ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ಹೇಳಿಕೊಳ್ಳುವ ಸ್ವಾತಂತ್ರ್ಯ ನೀಡಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.