ಕೋಲ್ಕತ್ತ: ಬೆಂಗಳೂರು ಎಫ್‌ಸಿ ತಂಡವು, ಸೂಪರ್ ಕಪ್ ಫುಟ್‌ಬಾಲ್ ಟೂರ್ನಿಯಲ್ಲಿ ‘ಸಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ. ಸಾಂಪ್ರದಾಯಿಕ ಎದುರಾಳಿಗಳಾದ ಮೋಹನ್ ಬಾಗನ್ ಮತ್ತು ಈಸ್ಟ್ ಬೆಂಗಾಲ್ ತಂಡಗಳು ಎ ಗುಂಪಿನಲ್ಲಿದ್ದು ‘ಕೋಲ್ಕತ್ತ ಡರ್ಬಿ’ಗೆ ದಾರಿಯಾಗಿದೆ.
ಈ ಎರಡು ದೈತ್ಯ ತಂಡಗಳು ಆರು ತಿಂಗಳಿಗಿಂತ ಕಡಿಮೆ ಅವಧಿಯಲ್ಲಿ ಮೂರನೇ ಬಾರಿ ಮುಖಾಮುಖಿ ಆಗಲಿವೆ.
ಗುರುವಾರ 16 ತಂಡಗಳನ್ನು ನಾಲ್ಕು ಗುಂಪುಗಳಲ್ಲಿ ತಂಡಗಳನ್ನು ವಿಂಗಡಿಸಲಾಯಿತು. ‘ಸಿ’ ಗುಂಪಿನಲ್ಲಿ ಬಿಎಫ್‌ಸಿ ಜೊತೆ ಮೊಹಮಡನ್ ಸ್ಪೋರ್ಟಿಂಗ್, ಪಂಜಾಬ್ ಎಫ್‌ಸಿ ಮತ್ತು ಗೋಕುಲಂ ಎಫ್‌ಸಿ ತಂಡಗಳಿವೆ.
ಬಾಗನ್ ಮತ್ತು ಈಸ್ಟ್ ಬೆಂಗಾಲ್ ನಡುವಣ ಪಂದ್ಯ ಅಕ್ಟೋಬರ್ 31ರಂದು ಮಡಗಾಂವ್‌ನ ಫತೋರ್ಡಾ ಕ್ರೀಡಾಂಗಣದಲ್ಲಿ ನಡೆಯುವ ನಿರೀಕ್ಷೆಯಿದೆ. ಬಾಗನ್ ತನ್ನ ಪಂದ್ಯಗಳನ್ನು ಅ. 25, 28 ಮತ್ತು 31ರಂದು ಆಡಲಿದೆ.
ಸಾಂಪ್ರದಾಯಿಕವಾಗಿ ಸೂಪರ್ ಕಪ್ ಟೂರ್ನಿ ಋತುವಿನ ಕೊನೆಯಲ್ಲಿ ನಡೆಯುತ್ತದೆ. ಸೂಪರ್ ಕಪ್ ವಿಜೇತರು 2026–27ನೇ ಸಾಲಿನ ಎಎಫ್‌ಸಿ ಕಪ್ ಚಾಂಪಿಯನ್ಸ್ ಲೀಗ್ 2ಕ್ಕೆ ಅರ್ಹತೆ ಪಡೆಯುತ್ತಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.