ADVERTISEMENT

ಫುಟ್‌ಬಾಲ್‌: ತವರಿನ ವಿದಾಯ ಪಂದ್ಯದಲ್ಲಿ ಮೆಸ್ಸಿ ಮಿಂಚು

ಏಜೆನ್ಸೀಸ್
Published 5 ಸೆಪ್ಟೆಂಬರ್ 2025, 23:30 IST
Last Updated 5 ಸೆಪ್ಟೆಂಬರ್ 2025, 23:30 IST
<div class="paragraphs"><p>ಲಯೊನೆಲ್ ಮೆಸ್ಸಿ</p></div>

ಲಯೊನೆಲ್ ಮೆಸ್ಸಿ

   

ಬ್ಯೂನೊ ಏರ್ಸ್‌: ತವರಿನಲ್ಲಿ ಅರ್ಜೆಂಟೀನಾ ತಂಡದ ಪರ ಕೊನೆಯ ಪಂದ್ಯ ಆಡಿದ ಲಯೊನೆಲ್ ಮೆಸ್ಸಿ ಅದನ್ನು ಸ್ಮರಣೀಯವಾಗುವಂತೆ ಮಾಡಿದರು. ವಿಶ್ವಕಪ್ ಅರ್ಹತಾ ಸುತ್ತಿನ ಪಂದ್ಯದಲ್ಲಿ ಅರ್ಜೆಂಟೀನಾ ಗುರುವಾರ 3–0 ಗೋಲುಗಳಿಂದ ಜಯಗಳಿಸಿತು. ಇದರಲ್ಲಿ ಮೆಸ್ಸಿ ಎರಡು ಗೋಲುಗಳನ್ನು ಬಾರಿಸಿದರು.

ಅರ್ಜೆಂಟೀನಾ ಈ ಸುತ್ತಿಗೆ ಮೊದಲೇ ವಿಶ್ವಕಪ್‌ಗೆ ಅರ್ಹತೆ ಪಡೆದಿತ್ತು. ಮೆಸ್ಸಿ ಕೊನೆಯ ಬಾರಿ ತವರಿನಲ್ಲಿ ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಕಾರಣ ಕ್ರೀಡಾಂಗಣ ಭರ್ತಿಯಾಗಿತ್ತು.

ADVERTISEMENT

‘ತವರಿನಲ್ಲಿ ಈ ರೀತಿಯಲ್ಲಿ ವೃತ್ತಿಜೀವನ ಕೊನೆಗೊಳಿಸುವುದು ನನ್ನ ಕನಸಾಗಿತ್ತು’  ಎಂದು ಮೆಸ್ಸಿ ಪ್ರತಿಕ್ರಿಯಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.