ADVERTISEMENT

ವಿಶ್ವಕಪ್ ಫುಟ್‌ಬಾಲ್‌: ಎಲ್ಲ ಪಂದ್ಯಗಳಿಗೆ ‘ಪಾನೀಯ ವಿರಾಮ’

ಏಜೆನ್ಸೀಸ್
Published 8 ಡಿಸೆಂಬರ್ 2025, 19:24 IST
Last Updated 8 ಡಿಸೆಂಬರ್ 2025, 19:24 IST
<div class="paragraphs"><p>ಫುಟ್‌ಬಾಲ್‌</p></div>

ಫುಟ್‌ಬಾಲ್‌

   

ಜ್ಯೂರಿಚ್‌: ಮುಂದಿನ ವರ್ಷದ ವಿಶ್ವಕಪ್‌ ಫುಟ್‌ಬಾಲ್ ಟೂರ್ನಿಯ ಪ್ರತಿಯೊಂದು ಪಂದ್ಯದಲ್ಲಿ ವಿರಾಮಕ್ಕೆ ಮೊದಲು ಮತ್ತು ನಂತರದ ಅವಧಿಯಲ್ಲಿ ಮೂರು ನಿಮಿಷಗಳ ‘ಪಾನೀಯ ವಿರಾಮ’ ಸೇರ್ಪಡೆ ಮಾಡುವುದಾಗಿ ವಿಶ್ವ ಫುಟ್‌ಬಾಲ್‌ ಫೆಡರೇಷನ್‌ (ಫಿಫಾ) ಸೋಮವಾರ ಪ್ರಕಟಿಸಿದೆ. 

ಆಟಗಾರರಿಗೆ ಬಾಯಾರಿಕೆ ನೀಗಿಸಲು ಅನುಕೂಲವಾಗುವಂತೆ, ಪೂರ್ವಾರ್ಧ ಮತ್ತು ಉತ್ತರಾರ್ಧದ ಆಟ ಶುರುವಾಗಿ 22 ನಿಮಿಷಗಳ ನಂತರ ರೆಫ್ರಿ ಅವರು ಮೂರು ನಿಮಿಷ ಪಂದ್ಯ ನಿಲುಗಡೆ ಮಾಡಲಿದ್ದಾರೆ.

ADVERTISEMENT

ಇದು ಹೆಚ್ಚಿನ ತಾಪಮಾನವಿರುವ ಪಂದ್ಯಗಳಿಗೆ ಮಾತ್ರವಲ್ಲ, ಬಿಸಿಲು ಕಡಿಮೆಯಿರುವ ಕ್ರೀಡಾಂಗಣಗಳಲ್ಲಿ ನಡೆಯುವ ಪಂದ್ಯಗಳಿಗೂ ಅನ್ವಯವಾಗಲಿದೆ. ಛಾವಣಿಯಿರುವ, ಏರ್‌ ಕಂಡಿಷನ್‌ ವ್ಯವಸ್ಥೆಯಿರುವ ಕ್ರೀಡಾಂಗಣಗಳಲ್ಲಿ ನಡೆಯುವ ಪಂದ್ಯಗಳಿಗೂ ಈ ನೀರಡಿಕೆಯ ವಿರಾಮ (ಹೈಡ್ರೇಷನ್ ಬ್ರೇಕ್‌) ಇರಲಿದೆ.

ಅಮೆರಿಕ, ಕೆನಡಾ ಮತ್ತು ಮೆಕ್ಸಿಕೊ ದೇಶಗಳ ಸಂಯುಕ್ತ ಆಶ್ರಯದಲ್ಲಿ 2026ರ ವಿಶ್ವಕಪ್ ಜೂನ್ 11 ರಿಂದ ಜುಲೈ 19ರವರೆಗೆ ನಡೆಯಲಿದೆ.

ಪ್ರಸಾರಕ ಸಂಸ್ಥೆಗಳ ಜೊತೆಯೂ ಈ ಬಗ್ಗೆ ಚರ್ಚೆ ನಡೆದಿದೆ. 22 ನಿಮಿಷಕ್ಕೆ ಕೆಲವೇ ಕ್ಷಣ ಮೊದಲು ಆಟಗಾರನೊಬ್ಬ ಗಾಯಾಳಾದಲ್ಲಿ ಆ ಕ್ಷಣದಲ್ಲೇ ಈ ಬ್ರೇಕ್ ಅನ್ವಯಿಸುವ ಅವಕಾಶವನ್ನೂ ರೆಫ್ರಿಗೆ ಕಲ್ಪಿಸಲಾಗಿದೆ. ಅದನ್ನು ರೆಫ್ರಿ ಸ್ಥಳದಲ್ಲೇ ನಿರ್ಧರಿಸುವರು ಎಂದು ಟೂರ್ನಿಯ ಮುಖ್ಯ ಅಧಿಕಾರಿ ಮನೊಲೊ ಝುಬಿರಿಯಾ ತಿಳಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.