ತಿರುವನಂತಪುರ: ಭಾರತದ ಮಹಿಳಾ ಶೂಟಿಂಗ್ ವಿಭಾಗದ ಅಗ್ರಶ್ರೇಯಾಂಕದ ಶೂಟರ್ ಅಂಜುಮ್ ಮೋದ್ಗಿಲ್ ಇಲ್ಲಿ ನಡೆಯುತ್ತಿರುವ 62ನೇ ರಾಷ್ಟ್ರೀಯ ಶೂಟಿಂಗ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನದ ಪದಕ ಗೆದ್ದರು.
ಭಾನುವಾರ ನಡೆದ ಸ್ಪರ್ಧೆಯಲ್ಲಿ ಪಂಜಾಬ್‌ನ ಅಂಜುಮ್ 458.6 ಪಾಯಿಂಟ್ಸ್ ಗಳಿಸಿದರು. ಮಹಾರಾಷ್ಟ್ರದ ತೇಜಸ್ವಿನಿ ಸಾವಂತ್ 457.7 ಪಾಯಿಂಟ್ಸ್ ಗಳಿಸಿ ಎರಡನೇ ಸ್ಥಾನ ಪಡೆದರು. ಮಧ್ಯಪ್ರದೇಶದ ಸುನಿಧಿ ಚೌಹಾಣ್ 443 ಪಾಯಿಂಟ್‌ಗಳೊಂದಿಗೆ ಕಂಚಿನ ಪದಕ ಪಡೆದರು.
ಅಂಜುಮ್ ಅವರು ಒಟ್ಟು ಐದು ಬಾರಿ ರಾಷ್ಟ್ರೀಯ ಚಿನ್ನದ ಪದಕ ಜಯಿಸಿದ್ದಾರೆ. 2020ರ ಟೊಕಿಯೊ ಒಲಿಂಪಿಕ್ಸ್ ಕ್ವಾಲಿಫೈಯರ್ ಸ್ಪರ್ಧೆಯಲ್ಲಿ 1168 ಪಾಯಿಂಟ್ಸ್ ಗಳಿಸಿದ್ದರು. ಅದರೊಂದಿಗೆ ಒಲಿಂಪಿಕ್ಸ್‌ಗೆ ಅರ್ಹತೆ ಗಿಟ್ಟಿಸಿದ್ದರು. ತೇಜಸ್ವಿನಿ 1163 ಪಾಯಿಂಟ್‌ಗಳೊಂದಿಗೆ ಎರಡನೇ ಸ್ಥಾನ ಪಡೆದಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.