ADVERTISEMENT

ತರಬೇತಿ ವೇಳೆ ಅವಘಡ; ಆರ್ಚರಿ ಪಟು ಶಿವಾಂಗಿನಿಗೆ ಚುಚ್ಚಿದ ಬಾಣ

ಪಿಟಿಐ
Published 10 ಜನವರಿ 2020, 12:43 IST
Last Updated 10 ಜನವರಿ 2020, 12:43 IST
ಶಿವಾಂಗಿನಿ ಗೊಹೇನ್‌
ಶಿವಾಂಗಿನಿ ಗೊಹೇನ್‌   

ನವದೆಹಲಿ: ಅಸ್ಸಾಂ ಮೂಲದ ಆರ್ಚರಿ ಪಟು ಶಿವಾಂಗಿನಿ ಗೊಹೇನ್‌ಗೆ ತರಬೇತಿ ವೇಳೆ ಎರಡು ಬಾಣಗಳು ಚುಚ್ಚಿದ್ದು, ಸರ್ಜರಿ ಮೂಲಕ ಬಾಣಗಳನ್ನು ಹೊರ ತೆಗೆಯಲಾಗಿದೆ. 12ರ ಹರೆಯದ ಶಿವಾಂಗಿನಿಯ ಕುತ್ತಿಗೆ ಮತ್ತು ಶರೀರದ ಮೇಲ್ಭಾಗಕ್ಕೆ ಎರಡು ಬಾಣಗಳು ಚುಚ್ಚಿತ್ತು. ಶುಕ್ರವಾರ ಏಮ್ಸ್‌ನಲ್ಲಿ ಸರ್ಜರಿ ನಡೆದಿದ್ದು 15 ಸೆ.ಮೀ ಉದ್ದದ ಲೋಹದ ತುಂಡನ್ನುದೇಹದಿಂದ ಹೊರ ತೆಗೆಯಲಾಗಿದೆ.

ಗುರುವಾರ ರಾತ್ರಿ ಆಕೆಯನ್ನು ವಿಮಾನ ಮೂಲಕಅಸ್ಸಾಂನ ದಿಬ್ರುಗಢ್‌ನಿಂದ ಏಮ್ಸ್‌ಗೆ ಕರೆತರಲಾಗಿತ್ತು. ತುಂಬಾ ಕ್ಲಿಷ್ಟಕರವಾದ ಸರ್ಜರಿ ನಂತರ ಆಕೆಯ ಆರೋಗ್ಯ ಸ್ಥಿರವಾಗಿದೆ ಎಂದು ಏಮ್ಸ್‌ನ ಹಿರಿಯ ವೈದ್ಯರು ಹೇಳಿದ್ದಾರೆ.

ಭುಜದ ಎಲುಬು ಮೂಲಕ ಒಳಹೊಕ್ಕ ಬಾಣವು ಆಕೆಯ ಕುತ್ತಿಗೆ, ಬೆನ್ನೆಲುಬು ಮತ್ತು ಎಡ ಶ್ವಾಸಕೋಶಕ್ಕೆ ಹಾನಿಯನ್ನುಂಟು ಮಾಡಿತ್ತು. ಸರ್ಜರಿ ನಂತರ ಶಿವಾಂಗಿನಿಯನ್ನು ಐಸಿಯುಗೆ ದಾಖಲಿಸಲಾಗಿದೆ.

ADVERTISEMENT

ಬಾಣದ 15 ಸೆಮಿ ಭಾಗವು ಶರೀರದ ಮೇಲ್ಭಾಗಕ್ಕೆ ಚುಚ್ಚಿತ್ತು. ಇದರಲ್ಲಿ 0.5 ಸೆಮೀ ಮಿದುಳು ಬಳ್ಳಿಯ ಮುಂಭಾಗಕ್ಕೆಚುಚ್ಚಿದ್ದರಿಂದ ಕ್ಷಿಷ್ಟಕರವಾದ ಸರ್ಜರಿ ಆಗಿತ್ತು. ಏಮ್ಸ್ ನ್ಯೂರೊಸರ್ಜರಿ ಪ್ರೊಫೆಸರ್ ಡಾ. ದೀಪಕ್ ಗುಪ್ತಾ ನೇತೃತ್ವದ ವೈದ್ಯರ ತಂಡವು ಸುಮಾರುಮೂರೂವರೆ ಗಂಟೆಗಳ ಕಾಲ ಶಸ್ತ್ರ ಚಿಕಿತ್ಸೆ ನಡೆಸಿದ್ದಾರೆ ಎಂದು ಆಸ್ಪತ್ರೆಯ ಮೂಲಗಳು ಹೇಳಿವೆ.

ಚುಬುವಾದಲ್ಲಿರುವ ದಾಖಾ ದೇವಿ ರಸಿವಾಸಿಯಾ ಕಾಲೇಜಿನಲ್ಲಿ ತರಬೇತಿ ಪಡೆಯುತ್ತಿದ್ದ ವೇಳೆಶಿವಾಂಗಿನಿಗೆಚುಚ್ಚಿದೆ. ಬುಧವಾರ ಘಟನೆ ನಡೆದಿದ್ದುಗುರುವಾರ ಸಂಜೆನವದೆಹಲಿಯ ಏಮ್ಸ್‌ಗೆ ದಾಖಲಿಸುವ ವರೆಗೆ ಬಾಣಆಕೆ ದೇಹದಲ್ಲಿಯೇ ಇತ್ತು. ಸ್ಥಳೀಯ ಕೋಚ್‌ ಮತ್ತು ಅಧಿಕಾರಿಗಳ ನಿರ್ಲಕ್ಷ್ಯ ಅವಘಡಕ್ಕೆ ಕಾರಣ ಎಂದು ರಾಜ್ಯ ಆರ್ಚರಿ ಅಸೋಸಿಯೇಷನ್ ದೂರಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.